ಲಸಿಕಾಕರಣದಲ್ಲಿ ಚಿಟಗುಪ್ಪ ಫಸ್ಟ್ ಹುಲಸೂರು ಲಾಸ್ಟ್

Capture
Published on

ರೇವಣಸಿದ್ದಪ್ಪ ಪಾಟೀಲ್ ಬೀದರ್
ಸಂಭವನೀಯ ಕರೊನಾ 4ನೇ ಅಲೆ ಆತಂಕ ಶುರುವಾಗಿದ್ದು, ಜನ ಮತ್ತೆ ಲಸಿಕಾಕರಣದತ್ತ ಮುಖ ಮಾಡಿದ್ದಾರೆ. ಫಸ್ಟ್, ಸೆಕೆಂಡ್ ಡೋಸ್ ಬಹುತೇಕ ಪೂರ್ಣಗೊಂಡಿದ್ದರೂ ಬೂಸ್ಟರ್ ಡೋಸ್ ಪಡೆಯಲು ಜನ ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿ ಶೇ.104.4 ಸ್ಟ್, ಶೇ.103.2 ಸೆಕೆಂಡ್ ಡೋಸ್ ಆಗಿದೆ. ಆದರೆ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ಕೇವಲ ಶೇ.45 ಪ್ರಗತಿ ಕಂಡಿದೆ. ಚಿಟಗುಪ್ಪ ತಾಲೂಕಿನಲ್ಲಿ ಶೇ.70.2 ಬೂಸ್ಟರ್ ಡೋಸ್ ಪಡೆದರೆ, ಹುಲಸೂರಿನಲ್ಲಿ ಕೇವಲ ಶೇ.21.3 ಲಸಿಕಾಕರಣ ಆಗಿದೆ.

ಔರಾದ್ ತಾಲೂಕಿನಲ್ಲಿ ಬೂಸ್ಟರ್ ಡೋಸ್​ಗೆ 4698 ಅರ್ಹರಿದ್ದರೆ, ಅದರಲ್ಲಿ 3107 (ಶೇ.66.1) ಜನ ಪಡೆದಿದ್ದಾರೆ. ಕಮಲನಗರದಲ್ಲಿ 6632ರ ಪೈಕಿ 3063 (ಶೇ.46.2), ಬಸವಕಲ್ಯಾಣ 12,897 ಪೈಕಿ 3718 (ಶೇ.28.8), ಹುಲಸೂರು 3261 ಪೈಕಿ 696 (ಶೇ.21.3), ಭಾಲ್ಕಿ 13,919 ಪೈಕಿ 4617 (ಶೇ.33.2), ಬೀದರ್ 22,513 ಪೈಕಿ 12,467 (ಶೇ.55.4), ಹುಮನಾಬಾದ್ 7050 ಪೈಕಿ 3318 (ಶೇ.47.1) ಹಾಗೂ ಚಿಟಗುಪ್ಪ ತಾಲೂಕಿನಲ್ಲಿ 3703 ಜನರ ಪೈಕಿ 2601 (ಶೇ.70.2) ಅರ್ಹರು ಬೂಸ್ಟರ್ ಡೋಸ್ ಪಡೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 74,673 ಅರ್ಹರಲ್ಲಿ 33,587 (ಶೇ.45) ಜನ ಪಡೆದಿದ್ದಾರೆ.

ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರು 12.07 ಲಕ್ಷ ಸೇರಿ 19,10,938 ಜನಸಂಖ್ಯೆ ಇದೆ. ಈ ಪೈಕಿ ಸೋಮವಾರವರೆಗೆ 25,05,436 ಡೋಸ್ ನೀಡಲಾಗಿದೆ. ಇದರಲ್ಲಿ 12,59,914 ಜನ ಮೊದಲ ಮತ್ತು 12,45,522 ಜನ 2ನೇ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. 18 ವರ್ಷ ಮೇಲ್ಪಟ್ಟ 12.07 ಲಕ್ಷ ಜನರ ಪೈಕಿ ಶೇ.104.4 ಮೊದಲ ಮತ್ತು ಶೇ.103.2 ಜನರಿಗೆ 2ನೇ ಡೋಸ್ ಹಾಕಲಾಗಿದೆ. ಜಿಲ್ಲೆಯ 8 ತಾಲೂಕು ಪೈಕಿ ಬಸವಕಲ್ಯಾಣ ಹೊರತುಪಡಿಸಿ ಇನ್ನುಳಿದ ಕಡೆ ಲಸಿಕಾಕರಣ ಯಶಸ್ವಿಯಾಗಿದೆ. ಬಸವಕಲ್ಯಾಣದಲ್ಲಿ 2,14,608 ಗುರಿ ಪೈಕಿ 2,12,766 (ಶೇ.91.1) ಪ್ರಗತಿ ಸಾಧಿಸಲಾಗಿದೆ. 1.99 ಲಕ್ಷ (ಶೇ.92.8) ಎರಡನೇ ಡೋಸ್ ನೀಡಲಾಗಿದೆ.

ವೇಗವಾಗಬೇಕಿದೆ ಮಕ್ಕಳ ವ್ಯಾಕ್ಸಿನೇಷನ್: ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರ ಜತೆ ಮಕ್ಕಳ ಲಸಿಕಾಕರಣ ನಡೆಯುತ್ತಿದೆ. 12-14 ಹಾಗೂ 15-17 ವರ್ಷದೊಳಗಿನ ಮಕ್ಕಳ ವ್ಯಾಕ್ಸಿನೇಷನ್ಗೆ ವೇಗ ನೀಡಬೇಕಾಗಿದೆ. 12-14 ವರ್ಷದೊಳಗಿನ ಮಕ್ಕಳ ಲಸಿಕೆ ಶೇ.95.9 ಹಾಗೂ 15-17 ವರ್ಷದೊಳಗಿನ ಮಕ್ಕಳ ಮೊದಲ ಡೋಸ್ ಶೇ.69.7, ಸೆಕೆಂಡ್ ಡೋಸ್ ಶೇ.62.6 ಆಗಿದೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಏಕೈಕ ಮಾರ್ಗ ಲಸಿಕಾಕರಣ. ಈಗಾಗಲೇ ಸ್ಟ್, ಸೆಕೆಂಡ್ ಡೋಸ್ ಪಡೆದ ಅರ್ಹರು ಬೂಸ್ಟರ್ ಡೋಸ್ ಕಡ್ಡಾಯವಾಗಿ ಪಡೆದುಕೊಳ್ಳಬೇಕು. 4ನೇ ಅಲೆ ಆತಂಕ ಇದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು.
| ಪ್ರಭು ಚವ್ಹಾಣ್, ಪಶು ಸಂಗೋಪನೆ ಸಚಿವ

ಜಿಲ್ಲಾದ್ಯಂತ ಈವರೆಗೆ ಮೊದಲ, 2ನೇ ಡೋಸ್ ಬಹುತೇಕ ಪೂರ್ಣಗೊಂಡಿದೆ. ಬೂಸ್ಟರ್ ಡೋಸ್ ಪ್ರಕ್ರಿಯೆಗೆ ವೇಗ ನೀಡಲಾಗಿದೆ. ಕಡಿಮೆ ಪ್ರಮಾಣದಲ್ಲಿ ಲಸಿಕಾಕರಣವಾದ ಕಡೆ ವ್ಯಾಕ್ಸಿನ್ ನೀಡಿಕೆ ಕಾರ್ಯ ಭರದಿಂದ ಸಾಗಿದೆ. ಅರ್ಹರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಲು ಮುಂದೆ ಬರಬೇಕು.
| ಡಾ.ರತಿಕಾಂತ ಸ್ವಾಮಿ, ಡಿಎಚ್ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net