‘ಲವ್ ಸ್ಟೋರಿ 1998’ ಬಿಡುಗಡೆ

Published on

ಮೈಸೂರು: ಯಶ್ವಿನ್ ಸಿನಿ ಪ್ರೊಡಕ್ಷನ್ ಹೌಸ್ ನಿರ್ಮಿಸಿರುವ ‘ಲವ್ ಸ್ಟೋರಿ 1998’ ಡಿ. 30 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ ಎಂದು ಚಿತ್ರದ ನಿರ್ದೇಶನ ನಾಗರಾಜ್ ತಲಕಾಡು ತಿಳಿಸಿದರು.
ಸದಭಿರುಚಿಯ ಈ ಚಲನಚಿತ್ರಕ್ಕೆ ಸಿನಿಪ್ರಿಯರು ಉತ್ತೇಜನ ನೀಡಬೇಕು. ಕುಟುಂಬವಿಡೀ ಕುಳಿತು ವೀಕ್ಷಿಸಬಹುದಾದ ಚಲನಚಿತ್ರ ಇದಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚಿತ್ರ ಬಿಎಡ್ ಕಾಲೇಜು ಒಂದರಲ್ಲಿ ನಡೆದ ನೈಜ ಪ್ರೇಮ ಕಥಾ ಹಂದರ ಒಳಗೊಂಡಿದೆ. ಜತೆಗೆ ದಕ್ಷಿಣ ಭಾರತದ ಚಲನಚಿತ್ರರಂಗಕ್ಕೆ ಹೊಸ ಕಥೆಯಾಗಿದೆ. ಇದೇ ವೇಳೆ ಪ್ರೀತಿಯ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುತ್ತಿದೆ ಎಂದರು.
ನಿರ್ಮಾಪಕರಾದ ಆರ್.ರಾಜಶ್ರೀ ಬಾಲಕೃಷ್ಣ, ಆರ್.ಜಗದೀಶ್, ಬಿ.ಕುಮಾರಸ್ವಾಮಿ, ಎಂ.ಮೋಹನ್‌ಕುಮಾರ್, ನಟ ಮಿಥುನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net