

ತೆಲಸಂಗ: ಲವ್ ಜಿಹಾದ್‌ನಂತಹ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳ ತಾಲೂಕು ಕಾರ್ಯಕರ್ತರು ಶುಕ್ರವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಛತ್ರಪತಿ ಶಿವಾಜಿ ವೃತ್ತದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಉಪ ತಹಸೀಲ್ದಾರ್ ಎಂ.ಎಸ್. ಯತ್ನಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಸಮಾಜದಲ್ಲಿ ಶಾಂತಿ ಕದಡುವ ಲವ್ ಜಿಹಾದ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂತಹ ಕೃತ್ಯಗಳ ಮೂಲಕ ಹಿಂದು ಸಮಾಜವನ್ನು ಒಡೆಯುವ ಹುನ್ನಾರ ನಡೆದಿದೆ. ತೆಲಸಂಗ ಗ್ರಾಮದ ಮುಸ್ಲಿಂ ಯುವಕ ಅಪ್ರಾಪ್ತೆಗೆ ಮತ್ತು ಬರುವ ಮಾತ್ರೆ ಕೊಟ್ಟು ಅತ್ಯಾಚಾರ ಎಸೆಗಿದ್ದಾನೆ. ಈ ರೀತಿಯ ಅಮಾನವೀಯ ಕೃತ್ಯ ನಡೆದಿರುವುದು ಖಂಡನೀಯ. ಇದನ್ನು ಹಿಂದು ಸಮಾಜ ಖಂಡಿಸುತ್ತದೆ. ಸಮಾಜಕ್ಕೆ ಕಂಟಕವಾಗಿ ಕಾಡುತ್ತಿರುವ ಲವ್ ಜಿಹಾದ್, ಮತಾಂತರ, ಗೋಹತ್ಯೆಯಂತಹ ದುಷ್ಕೃತ್ಯಕ್ಕೆ ಕಡಿವಾಣ ಹಾಕಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣ ಮರುಕಳಿಸದಂತೆ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಲಕ್ಷ್ಮೀ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ವಿಎಚ್‌ಪಿ ಜಿಲ್ಲಾ ಸಂಚಾಲಕ ವಿಠ್ಠಲ ಮಾತನಾಡಿ, ಜಗತ್ತಿಗೆ ಧರ್ಮದ, ಸಂಸ್ಕಾರದ ಪಾಠವನ್ನು ಕಲಿಸಿಕೊಟ್ಟ ಹಿಂದು ಧರ್ಮದ ಮೇಲೆ ಅನ್ಯಾಯ ನಡೆದರೆ ಸಹಿಸಲು ಸಾಧ್ಯವಿಲ್ಲ. ಹಿಂದು ಯುವತಿಯರ ಮೇಲೆ ಲವ್ ಜಿಹಾದ್ ಸೇರಿದಂತೆ ಅನೇಕ ಮಾರ್ಗಗಳಿಂದ ಭಾರತವನ್ನು ಅಭದ್ರಗೊಳಿಸುವ, ಹಿಂದು ಧರ್ಮವನ್ನು ಮುಗಿಸಬೇಕೆನ್ನುವ ಷಡ್ಯಂತ್ರ ನಡೆಯುತ್ತಿದೆ. ಧರ್ಮ ಹಾಗೂ ರಾಷ್ಟ್ರೀಯತೆ ವಿಷಯ ಬಂದಾಗ ಹಿಂದುಗಳು ರಾಜೀಯಾದ ಉದಾಹರಣೆಯೇ ಇಲ್ಲ. ಹಿಂದುಗಳು ಯಾರ ಮೇಲೂ ಅನ್ಯಾಯವೆಸಗುವುದಿಲ್ಲ ಎಂಬುದು ಇತಿಹಾಸವೇ ಹೇಳುತ್ತದೆ. ಲವ್ ಜಿಹಾದ್‌ಗೆ ಬಲಿಯಾದ ಹಿಂದು ಯುವತಿಯರು ಇಂದು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ ಎಂದರು. ವೀರೇಶ್ವರ ದೇವರು ಮಾತನಾಡಿ, ಈ ಮಣ್ಣಿನ ಸಂಸ್ಕೃತಿಯನ್ನು ಅಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಜಗತ್ತನ್ನೇ ಗೆಲ್ಲುವ ಶಕ್ತಿ ಇರುವ ಭಾರತೀಯ ಸಂಸ್ಕೃತಿಯ ನೆಲದಲ್ಲಿ ಕೋಮುಭಾವನೆ ಹರಡದಂತೆ ಒಟ್ಟಾಗಿ ಹೋರಾಡಬೇಕಿದೆ. ಅನ್ಯಾಯ, ಅತ್ಯಾಚಾರಗಳಿಗೆ ಇತಿಶ್ರೀ ಹಾಡಬೇಕಿದೆ ಎಂದರು. ಜಿಲ್ಲಾ ಧರ್ಮಾಚಾರ್ಯ ಸಂಯೋಜಕ ವೆಂಕಟೇಶ ದೇಶಪಾಂಡೆ, ಸಂತೋಷ ಕುಲಕರ್ಣಿ, ಕೇಶವ ಉಂಡೋಡಿ, ಈಶ್ವರ ಉಂಡೋಡಿ, ಜಗದೀಶ ಮಠದ, ಶ್ರೀಶೈಲ ಶೆಲ್ಲೆಪ್ಪಗೋಳ, ನಾಗರಾಜ ಉಂಡೋಡಿ, ಬಸು ಸಾವಳಗಿ, ಸಹದೇವ ದಶವಂತ, ಹನುಮಂತ ಸಾವಳಗಿ, ಕಾಶಪ್ಪ ಇತರರಿದ್ದರು.