ಲಯನ್ಸ್ ಸಂಸ್ಥೆಯಿಂದ ಹಲವು ಸಾಮಾಜಿಕ ಕಾರ್ಯ

11 gkp 01
Published on

ಗೋಣಿಕೊಪ್ಪ: ಗೋಣಿಕೊಪ್ಪದಲ್ಲಿರುವ ಲಯನ್ಸ್ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಅಂಗವಾಗಿ ನಿರ್ಮಿಸಿರುವ ಹಾಕಿ ಪಂದ್ಯಕ್ಕಾಗಿ ನಿರ್ಮಿಸಿರುವ ಮಲ್ಟಿ ಸ್ಪೋರ್ಟ್ಸ್ ಟರ್ಫ್ ಮೈದಾನವನ್ನು ಶುಕ್ರವಾರ ಲಯನ್ಸ್ ಜಿಲ್ಲಾ ಪ್ರಾಂತಪಾಲ ಎಸ್. ಸಂಜಿತ್ ಶೆಟ್ಟಿ ಉದ್ಘಾಟಿಸಿದರು.


ಶಿಕ್ಷಣ, ಕ್ರೀಡೆ, ಸಾಮಾಜಿಕ ಜವಾಬ್ದಾರಿಯೊಂದಿಗೆ ಉತ್ತಮ ಸೇವೆ ಹಾಗೂ ಧ್ಯೇಯದೊಂದಿಗೆ ಲಯನ್ಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. 50 ವರ್ಷ ಪೂರೈಸಿರುವ ಗೋಣಿಕೊಪ್ಪ ಲಯನ್ಸ್ ಸಂಸ್ಥೆ ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರಕ್ಕೆ ತಮ್ಮದೇ ಆದ ಕಾಣಿಕೆ ನೀಡಿದೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಈಗ ನಿರ್ಮಿಸಿರುವ ಟರ್ಫ್ ಮೈದಾನ ಮತ್ತಷ್ಟು ಕ್ರೀಡಾಕಲಿಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಶಾಲೆಯ ಎರಡು ತಂಡಗಳು ಹಾಕಿ ಪ್ರದರ್ಶನ ಪಂದ್ಯ ಆಡುವ ಮೂಲಕ ಗಮನ ಸೆಳೆದವು. ಶಾಲಾ ವಿದ್ಯಾರ್ಥಿಗಳಿಂದ ಏರೋಬಿಕ್ ನೃತ್ಯ ಮೂಡಿ ಬಂದವು. ಕರಾಟೆ ಪಟುಗಳು ಕರಾಟೆ ಪ್ರದರ್ಶನ ನೀಡಿ ಗಮನ ಸೆಳೆದರು. ಹಿರಿಯ ಕರಾಟೆ ಪಟು ಜಮ್ಮಡ ಜೋಯಪ್ಪ, ಮೂಡಗದ್ದೆ ವಿಕ್ರಂ ನಡೆಸಿಕೊಟ್ಟರು.


ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಪ್ರಗತಿ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಅಮ್ಮಂಡ ಚಿಣ್ಣಪ್ಪ, ಕಾರ್ಯದರ್ಶಿ ಪೊನ್ನಿಮಾಡ ಲೋಕೇಶ್ ಕಾರ್ಯಪ್ಪ, ಖಜಾಂಚಿ ಚೆಪ್ಪುಡೀರ ಅಪ್ಪಣ್ಣ, ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಪಾರುವಂಗಡ ಬೋಸ್ ಪೆಮ್ಮಯ್ಯ, ಹಿರಿಯ ಸದಸ್ಯ ಚೆಪ್ಪುಡೀರ ಮುತ್ತಣ್ಣ, ಡಾ. ಮಚ್ಚಮಾಡ ಸೂರಜ್ ಉತ್ತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net