ಲಯನ್ಸ್ ಶಾಲೆಗೆ 7 ಪ್ರಶಸ್ತಿ

20 gkp 01
Published on

ಗೋಣಿಕೊಪ್ಪ: ಗಾಂಧಿ ಜಯಂತಿ ಪ್ರಯುಕ್ತ ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಲಯನ್ಸ್ ಶಾಲೆ 7 ಪ್ರಶಸ್ತಿ ಪಡೆದರೆ, ಕಾಲ್ಸ್ 5 ಪ್ರಶಸ್ತಿ ಪಡೆದುಕೊಂಡು ದ್ವಿತೀಯ ಸ್ಥಾನ ಅಲಂಕರಿಸಿತು.

ಜಮ್ಮಡ ಮಾದಪ್ಪ ಸುಬ್ಬಯ್ಯ, ಕೊಳ್ಳಿಮಾಡ ಸಿ ಮಂದಣ್ಣ ಜ್ಞಾಪಕಾರ್ಥ ‘ನನ್ನ ಜೀವನವೇ ನನ್ನ ಸಂದೇಶ’ ವಿಷಯ ಕುರಿತು ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿದ್ದರು.

ಫಲಿತಾಂಶ: ಪ್ರೌಢ ವಿಭಾಗ ; ಇಂಗ್ಲಿಷ್ ವಿಭಾಗದಲ್ಲಿ ಲಯನ್ಸ್ ಪ್ರೌಢಶಾಲೆಯ ಕೆ.ಡಿ.ಭಾಷಿತ (ಪ್ರ), ಎಸ್.ಎಂ.ಎಸ್ ಶಾಲೆಯ ಎ.ಇ.ಮುತ್ತಮ್ಮ (ದ್ವಿ), ಕಾಲ್ಸ್ ಶಾಲೆಯ ಸಾಥ್ವಿಕ್ ತಿಮ್ಮಯ್ಯ ಹಾಗೂ ಲಯನ್ಸ್ ಶಾಲೆಯ ದೀತ್ಯಾ ದೇಚಮ್ಮ (ತೃ) ಸ್ಥಾನ ಪಡೆದುಕೊಂಡರು. ಕನ್ನಡ ವಿಭಾಗದಲ್ಲಿ ಲಯನ್ಸ್ ಶಾಲೆಯ ಎಂ.ಆರ್.ಗೈನಾ (ಪ್ರ), ಲಯನ್ಸ್ ಶಾಲೆಯ ರಿಶಾ ಗಣಪತಿ (ದ್ವಿ), ಕಾಲ್ಸ್ ಶಾಲೆಯ ಪ್ರಾಪ್ತಿ ಪೊನ್ನಮ್ಮ ಹಾಗೂ ಹಿತಾ ಅಕ್ಕಮ್ಮ (ತೃತೀಯ.
ಪ್ರಾಥಮಿಕ ವಿಭಾಗ ; ಇಂಗ್ಲಿಷ್ ವಿಭಾಗದಲ್ಲಿ ಕಾಲ್ಸ್ ಶಾಲೆಯ ಚರಿಷ್ಮಾ ಕಾವೇರಮ್ಮ (ಪ್ರ), ಲಯನ್ಸ್‌ನ ಐ. ಜಿ. ಶಕ್ತ ಚಂಗಪ್ಪ (ದ್ವಿ), ದಿಶಾ ಉಪೇಂದ್ರ (ತೃ), ಕನ್ನಡ ವಿಭಾಗದಲ್ಲಿ ಲಯನ್ಸ್ ಶಾಲೆಯ ಕೆ.ಕೆ.ತಾನ್ಯ ದೇಚಮ್ಮ (ಪ್ರ), ಕಾಲ್ಸ್ ಶಾಲೆಯ ಮಯೂರ್ ಮಂದಣ್ಣ (ದ್ವಿ), ಇಶಾನಿ ಬಿ. ರಾಣಿ ತೃತೀಯ ಸ್ಥಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net