ಲಯನ್ಸ್​ ಬಡವರ ಸೇವೆ ಮಾಡಲಿ

3
ರಾಮದುರ್ಗ ಪಟ್ಟಣದಲ್ಲಿ ಏರ್ಪಡಿಸಿದ್ದ ಲಯನ್ಸ್​ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಶಾಸಕ ಅಶೋಕ ಪಟ್ಟಣ ಮಾತನಾಡಿದರು. ಭಾರತಿ ವಡವಿ, ಜ್ಯೋತಿ ಬದಾಮಿ, ಪ್ರಭಾಕರ ಕಂಬಾರ, ಸುನೀಲ ಹೊಂಗಲ ಇತರರಿದ್ದರು.
Published on

ರಾಮದುರ್ಗ: ಸಮಾಜದಲ್ಲಿ ಬಡವರ ಸೇವೆ ಮಾಡಲು ಹಲವು ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳುತ್ತಿರುವ ಲಯನ್ಸ್​ ಸಂಸ್ಥೆಯ ಕಾರ್ಯ ಶ್ಲಾನೀಯ. ಜನರಿಗೆ ಮತ್ತಷ್ಟು ಉಪಯುಕ್ತವಾಗುವ ಕೆಲಸಗಳು ಲಯನ್ಸ್​ ಸಂಸ್ಥೆಯಿಂದ ನೆರವೇರಲಿ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ಪಟ್ಟಣದ ಪಿ.ಎಂ .ಪಾಲರೇಶಾ ಲೈನ್ಸ್​ ಕಣ್ಣಿನ ಆಸ್ಪತ್ರೆಯಲ್ಲಿ ಸೋಮವಾರ ಏರ್ಪಡಿಸಿದ್ದ ಲಯನ್ಸ್​ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸುಸಜ್ಜಿತ ಕಣ್ಣಿನ ಆಸ್ಪತ್ರೆ ತೆರೆದು ಬಡವರು, ನೊಂದವರ ಸೇವೆ ಮಾಡುತ್ತಿರುವುದು ಹರ್ಷ ತಂದಿದೆ. ಸಮಾಜದಲ್ಲಿ ಬಡವರ ಸೇವೆ ಮಾಡುವ ಸಂಸ್ಥೆ ಹಾಗೂ ಕಾರ್ಯಕರ್ತರ ಕಾರ್ಯಗಳಿಗೆ ಸದಾ ಬೆಂಬಲವಾಗಿರುತ್ತೇನೆ. ಕಣ್ಣಿನ ಆಸ್ಪತ್ರೆಯ ಅಭಿವೃದ್ಧಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅಡಿಯಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಪದಗ್ರಹಣ ಸಮಾರಂಭ ನಡೆಸಿಕೊಟ್ಟು ಮಾತನಾಡಿದ ಭಾರತಿ ವಡವಿ, ಲಯನ್ಸ್​ ಸಂಸ್ಥೆಯ ತಾಲೂಕು ಸೇರಿ ಗ್ರಾಮೀಣ ಪ್ರದೇಶಗಳಲ್ಲಿಯೂ ಸರ್ವರ ಏಳಿಗೆ ರೂಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ ಎಂದರು. ಕವಯತ್ರಿ ಜ್ಯೋತಿ ಬದಾಮಿ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಸಮಾಜಸೇವೆ ಮಾಡಲು ಮಹಿಳೆಯರೂ ಮುಂದಿದ್ದು, ಹೆಚ್ಚೆಚ್ಚು ಜನ ಭಾಗಿಯಾಗಬೇಕು ಎಂದರು.

ಅಧ್ಯರಾಗಿ ಪ್ರಭಾಕರ ಕಂಬಾರ, ಕಾರ್ಯದರ್ಶಿಯಾಗಿ ಸುನೀಲ ಹೊಂಗಲ, ಖಜಾಂಚಿಯಾಗಿ ಬಿ.ಪಿ. ಅರಳಿಮಟ್ಟಿ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಸಂಸ್ಥೆಯ ಟ್ರಸ್ಟ್​ ಅಧ್ಯ ಬಾಬಣ್ಣ ತ್ತೇಪುರ, ಮಾಜಿ ಅಧ್ಯ ವೆಂಕಟೇಶ ಜಾಯಿ, ಡಾ.ಬಿ.ಎಲ್​. ಸಂಕನಗೌಡ್ರ, ಗಂಗಾಧರ ಕಮ್ಮಾರ ಇತರರಿದ್ದರು. ವೆಶಾಲಿ ಹಿರೇರಡ್ಡಿ ನಿರೂಪಿಸಿದರು. ವೆಶಾಲಿ ಸಂಕನಗೌಡ್ರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net