

ಸರಗೂರು: ತಾಲೂಕಿನ ಪಟ್ಟಣದ ಬುಧವಾರರಂದು ಲಯನ್ಸ್ ಅಕಾಡೆಮಿ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಲಯನ್ಸ್ ಅಕಾಡೆಮಿ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಲಯನ್ ಬ್ರಹ್ಮದೇವಯ್ಯ ಉದ್ಘಾಟಿಸಿದರು. ಲಯನ್ ಎಸ್.ಬಿ.ನಾಗರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ, ರುಕ್ಮಿಣಿಯರ ವೇಷಭೂಷಣ ತೊಟ್ಟ ನೂರಾರು ಮಕ್ಕಳು ಗಮನ ಸೆಳೆದರು.
ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಬಿ.ಡಿ.ದಾಸಾಚಾರಿ, ಮುಖ್ಯಶಿಕ್ಷಕಿ ಪದ್ಮಶ್ರೀ, ಶಿಕ್ಷಕರು, ಪಾಲಕರು ಇದ್ದರು.