ಲೋಡ್‌ಶೆಡ್ಡಿಂಗ್ ಸರಿಪಡಿಸಲು ಒತ್ತಾಯಿಸಿ ರಸ್ತೆ ತಡೆ

photography
ಮುಧೋಳ ತಾಲೂಕಿನ ಶಿರೋಳ ಕ್ರಾಸ್ ಬಳಿ ರಾಜ್ಯ ರೈತ ಸಂಘದ ಕಾರ್ಯಕರ್ತರು ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿ ಸಂಚಾರ ತಡೆ ನಡೆಸಿದರು. ಹನುಮಂತ ನವಾಬ್ , ವೆಂಕಣ್ಣ ಮಳಲಿ, ಮುದಕಣ್ಣ ಮೆಳ್ಳಿಗೇರಿ, ಸುರೇಶ ಚಿಂಚಲಿ, ಸಂತೋಷ ನಾಗರಡ್ಡಿ, ಸಂಗಯ್ಯ ಬಾಡಗಿ ಇತರರು ಇದ್ದರು.
Published on

ಮುಧೋಳ:ಹಲವಾರು ದಿನಗಳಿಂದ ನಿರಂತರವಾಗಿ ಲೋಡ್ ಶೆಡ್ಡಿಂಗ್ ಮಾಡಿ ರೈತರಿಗೆ ತೊಂದರೆ ಕೊಡುತ್ತಿರುವ ಹೆಸ್ಕಾಂ ಅಧಿಕಾರಿಗಳ ಹಾಗೂ ಸಿಬ್ಬಂದಿ ಕಾರ್ಯವೈಖರಿ ಖಂಡಿಸಿ ತಾಲೂಕಿನ ಶಿರೋಳ ಕ್ರಾಸ್ ಬಳಿ ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿ ಸಂಚಾರ ತಡೆದು ರಾಜ್ಯ ರೈತ ಸಂಘದವರು ಶನಿವಾರ ಪ್ರತಿಭಟಿಸಿದರು.

ಸಂಜೆ ಪ್ರಾರಂಭವಾದ ರಸ್ತೆ ತಡೆ ರಾತ್ರಿಯವರೆಗೂ ನಡೆದು ಎರಡು ಗಂಟೆ ಪ್ರಯಾಣಿಕರು ಪರದಾಡುವಂತಾಯಿತು. ಸ್ಥಳಕ್ಕೆ ಹೆಸ್ಕಾಂ ಎಇಇ ಬಿ.ಎ. ಮರಕಟ್ಟಿ ಹಾಗೂ ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್‌ಐ ಅಜೀತ ಹೊಸಮನಿ ಭೇಟಿ ನೀಡಿ, ಸಮರ್ಪಕವಾಗಿ ವಿದ್ಯುತ್ ಪೂರೈಸುವ ಭರವಸೆ ನೀಡಿ ಹೋರಾಟಗಾರರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.

ಹನುಮಂತ ನವಾಬ, ವೆಂಕಣ್ಣ ಮಳಲಿ, ಮುದಕಣ್ಣ ಮೆಳ್ಳಿಗೇರಿ, ಸುರೇಶ ಚಿಂಚಲಿ, ಸಂತೋಷ ನಾಗರಡ್ಡಿ, ಸಂಗಯ್ಯ ಬಾಡಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net