ಲಚ್ಯಾಣ ಗ್ರಾಮದಲ್ಲಿ ಪ್ರವಚನ ಕಾರ್ಯಕ್ರಮ ಯಶಸ್ವಿಗೊಳಿಸಿ

Pravachana, Ashoka Gowda Patila, Lachyana, Indi, Mallaiah Temple, Banthanala,
ಇಂಡಿ ತಾಲೂಕಿನ ಲಚ್ಯಾಣದ ಮಲ್ಲಯ್ಯ ಮಂದಿರದ ಆವರಣದಲ್ಲಿ ಮಲ್ಲಯ್ಯ ದೇವರ ದೇವಸ್ಥಾನದ ಕಟ್ಟಡ ಮರು ನಿರ್ಮಾಣ ಕಾರ್ಯದ ಪ್ರಾರಂಭೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ ನಡೆಯಿತು. ಅಶೋಕಗೌಡ ಪಾಟೀಲ, ಗಂಗಾಧರ ಪಾಟೀಲ, ಸುರೇಶ ವಾಲಿ, ಮಲಕಣ್ಣ ಗುಬ್ಯಾಡ ಇತರರಿದ್ದರು.
Published on

ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದಲ್ಲಿನ ಮಲ್ಲಯ್ಯ ದೇವಸ್ಥಾನ ಕಟ್ಟಡ ಮರು ನಿರ್ಮಾಣ ಕಾರ್ಯದ ಪ್ರಾರಂಭೋತ್ಸವ ಏ.9 ರಂದು ಜರುಗುವ ಅಂಗವಾಗಿ ಏ.1 ರಿಂದ 9 ರವರೆಗೆ ಬಂಥನಾಳದ ಡಾ.ವೃಷಭಲಿಂಗ ಮಹಾಶಿವಯೋಗಿಗಳ ಸಾನ್ನಿಧ್ಯದಲ್ಲಿ ಜರುಗಲಿರುವ ಪ್ರವಚನ ಕಾರ್ಯಕ್ರಮ ಯಶಸ್ವಿಗೊಳಿಸಲು ಗ್ರಾಮಸ್ಥರು ಬುಧವಾರ ನಿರ್ಧರಿಸಿದರು.

ಗ್ರಾಮದ ಮಲ್ಲಯ್ಯ ಮಂದಿರದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ- ಹಾಲಿ ಸದಸ್ಯ ಅಶೋಕಗೌಡ ಪಾಟೀಲ ಮಾತನಾಡಿ, ನಿರಂತರ 9 ದಿನ ಪ್ರವಚನ ಕಾರ್ಯಕ್ರಮವನ್ನು ಚಡಚಣ ತಾಲೂಕಿನ ತದ್ದೇವಾಡಿಯ ಮಹಾಂತಯ್ಯ ಶಾಸಿಗಳು ನಿತ್ಯ ಸಂಜೆ 7.30 ರಿಂದ 8.30 ರವರೆಗೆ ನಡೆಸಿಕೊಡಲಿದ್ದಾರೆ ಎಂದರು.

ಬೇಸಿಗೆಯ ಈ ದಿನಗಳಲ್ಲಿ ಶಾಲೆಗಳಿಗೆ ರಜೆ ಇರುತ್ತದೆ. ರೈತರು ಸುಗ್ಗಿ ಕಾಲದ ಕೃಷಿ ಕೆಲಸಗಳನ್ನು ಮುಗಿಸಿಕೊಂಡು ಕೊಂಚ ಬಿಡುವಿನ ವೇಳೆಯಲ್ಲಿ ಇದ್ದಾರೆ. ಮತ್ತೊಂದೆಡೆ ಗ್ರಾಮದ ಶಿಕ್ಷಕರು ಈಗ ವಿಶ್ರಾಂತಿಯ ಗಳಿಗೆಯಲ್ಲಿದ್ದಾರೆ. ಸಮಯೋಚಿತ ಈ ಕಾರ್ಯಕ್ರಮದಿಂದ ಸರ್ವರಿಗೂ ಪ್ರಯೋಜನವಾಗಲಿದೆ. ಶಾಲಾ ಮಕ್ಕಳಿಗೂ ನಿತ್ಯ ಉತ್ತಮ ಸಂಸ್ಕಾರ ದೊರೆಯಲಿದೆ. ಆದ್ದರಿಂದ ಈ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸೋಣ ಎಂದರು.

ಅಗತ್ಯವಾದ ನೆಲ ಹಾಸು, ಸೌಂಡ್ ಸಿಸ್ಟ್‌ಂ, ವಿದ್ಯುತ್ ದೀಪ, ಕುಡಿಯುವ ನೀರು, ನಿತ್ಯ ಅನ್ನ ಪ್ರಸಾದ, ಹೂ ಮಾಲೆಯ ವ್ಯವಸ್ಥೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ತಾಲೂಕು ಪಂಚಾಯಿತಿ ಸದಸ್ಯ ಗಂಗಾಧರ ಪಾಟೀಲ, ಗ್ರಾಪಂ ಸದಸ್ಯ ಸುರೇಶ ವಾಲಿ, ಗ್ರಾಪಂ ಮಾಜಿ ಅಧ್ಯಕ್ಷ ಮಲಕಣ್ಣ ಗುಬ್ಯಾಡ, ನಿವೃತ್ತ ಶಿಕ್ಷಕ ವಿ.ಎಂ. ಕರಾಳೆ, ಈರಣ್ಣ ಅಹಿರಸಂಗ, ಮಹಾದೇವ ಕಾಸಾರ, ಸಂಗನಬಸವ ಬಿರಾದಾರ, ಡಿ.ಎ. ಮುಜಗೊಂಡ, ರಾಜಶೇಖರ ನಿಂಬರಗಿ, ಮಹೇಶ ಸಂಭಾಜಿ, ರಾಜಶೇಖರ ಪಾಟೀಲ, ಕಲ್ಲನಗೌಡ ಬಿರಾದಾರ, ಬಸವರಾಜ ಹೊಸಮನಿ, ಅಪ್ಪಾಶ ಮೈದರಗಿ, ಉಮೇಶ ಬಿರಾದಾರ, ಚನ್ನಬಸು ಮುಜಗೊಂಡ, ಮಲ್ಲೇಶಿ ಕರಾಳೆ, ಸದಾಶಿವ ಬೊಳಗೊಂಡ, ಶಂಕರಗೌಡ ಬಿರಾದಾರ, ಈರಣ್ಣ ಮುಜಗೊಂಡ, ರಮೇಶ ಅಹಿರಸಂಗ, ನಿಲಿನ್ ಕಿರಣಗಿ, ಅಕ್ಷಯ ಮುಜಗೊಂಡ, ಬಸವರಾಜ ಲಾಳಸೇರಿ, ಕುಲಂಕಾರ ಬಿರಾದಾರ, ಸುರೇಶ ಬಿದರಕೋಟಿ, ಈರಣ್ಣ ಬಿರಾದಾರ, ಸತೀಶ ಕರಾಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net