ಲಘುವಾಹನ ಸಂಚಾರಕ್ಕೆ ಚಾರ್ಮಾಡಿ ಮುಕ್ತ

charmady
Published on

ಮಂಗಳೂರು: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಲಘು ವಾಹನಗಳಿಗೆ ದಿನದ 24 ಗಂಟೆಯೂ ಸಂಚರಿಸುವುದಕ್ಕೆ ಅವಕಾಶ ನೀಡಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.

ಇದುವರೆಗೆ ಲಘು ವಾಹನಗಳಾದ ಟೆಂಪೊ ಟ್ರಾವೆಲ್ಲರ್, ವ್ಯಾನ್, ಕಾರು, ಜೀಪ್, ಆಂಬುಲೆನ್ಸ್, ಎಲ್‌ಸಿವಿ, ದ್ವಿಚಕ್ರ ವಾಹನಗಳು ಬೆಳಗ್ಗೆ 6ರಿಂದ ಸಂಜೆ 7ರ ವರೆಗೆ ಮಾತ್ರ ಸಂಚರಿಸಬಹುದಿತ್ತು. ಸದ್ಯ ನಿರ್ಬಂಧ ತೆರವುಗೊಳಿಸಿದೆ. ಕೆಎಸ್ಸಾರ್ಟಿಸಿ ಕೆಂಪು ಬಸ್, ಆರು ಚಕ್ರದ ಲಾರಿಗಳಿಗೆ ರಾತ್ರಿ ಸಂಚಾರಕ್ಕೆ ಅವಕಾಶವಿಲ್ಲ, ಬೆಳಗ್ಗೆ 6ರಿಂದ ಸಂಜೆ 7ರ ವರೆಗೆ ಮಾತ್ರ ಸಂಚರಿಸಬಹುದು. ಆದರೆ ಬುಲೆಟ್ ಟ್ಯಾಂಕರ್, ಶಿಪ್ ಕಾರ್ಗೊ ಕಂಟೈನರ್, ಲಾಂಗ್ ಚಾಸೀಸ್ ವಾಹನ, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಆಕ್ಸೆಲ್ ಟ್ರಕ್, ಟ್ರಕ್ ಟ್ರೇಲರ್, ಕೆಎಸ್ಸಾರ್ಟಿಸಿ ರಾಜಹಂಸ ಮತ್ತಿತರ ಅಧಿಕ ಭಾರದ ಸರಕು ಸಾಗಾಟ ವಾಹನ ಸಂಚಾರ ಸಂಚಾರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net