ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಪುರ ಪ್ರವೇಶ

29 SBG-1 Lakshmisena Swamiji Purapravesha (7)
ಕೊಲ್ಲಾಪುರ ಮಠದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಅವರಿಗೆ ಶ್ರವಣಬೆಳಗೊಳದಲ್ಲಿ ಮಂಗಳವಾರ ಭವ್ಯ ಸ್ವಾಗತ ನೆರವೇರಿಸಲಾಯಿತು.
Published on

ಶ್ರವಣಬೆಳಗೊಳ: ಕೊಲ್ಲಾಪುರ ಜೈನ ಮಠದ ನೂತನ ಪೀಠಾಧಿಪತಿ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಅವರಿಗೆ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಮಂಗಳವಾರ ಪುರ ಪ್ರವೇಶದ ನಿಮಿತ್ತ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ಜೈನ ಮಠದ ಚಂದ್ರಪ್ರಭ ತೀಥರ್ಂಕರರ ಬಸದಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾನಿಧ್ಯ ವಹಿಸಿದ್ದ ಕ್ಷೇತ್ರದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಅರ್ಪಣಾ ಮನೋಭಾವದಿಂದ ಧರ್ಮ, ಸಮಾಜ ಕಟ್ಟಲು ಸಂಸ್ಥೆಗಳಿಗೆ ಕಾರ್ಯಕರ್ತರ ಕೊರತೆ ಸಾಕಷ್ಟು ಇದೆ ಎಂದು ಹೇಳಿದರು.
ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಶ್ರೀಗಳು ಮಾತನಾಡಿ, ಚಾರುಕೀರ್ತಿ ಶ್ರೀಗಳ ಅಪ್ಪಣೆಯಂತೆ ಸಮಾಜ ಸೇವೆಗೆ ಅರ್ಪಿಸಿಕೊಂಡಿದ್ದೇನೆ. ಧರ್ಮ ಪೀಠಕ್ಕೆ ಅರ್ಪಿಸಿಕೊಂಡ ನಂತರ ತಾಯಿ, ತಂದೆ, ಕುಟುಂಬದವರ ಕರುಳ ಸಂಬಂಧವನ್ನು ತ್ಯಾಗ ಮಾಡಿದ್ದು, ಸಂಪೂರ್ಣವಾಗಿ ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಕೊಲ್ಲಾಪುರದ ಶ್ರೀಗಳ ಆಯ್ಕೆ ಮತ್ತು ಪಟ್ಟಾಭಿಷೇಕಕ್ಕೆ ಶ್ರಮಿಸಿದ ಶಾಸಕ ಅಭಯ್‌ಪಾಟೀಲ್ ಮತ್ತು ಮಾಜಿ ಶಾಸಕ ಸಂಜಯ್ ಪಾಟೀಲ್‌ಗೆ ಅವರ ಅನುಪಸ್ಥಿತಿಯಲ್ಲಿ ಸಮಾಜ ರತ್ನ, ವ್ಯಾಖ್ಯಾನ ವಿದ್ಯಾ ವಾಚಸ್ಪತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾಜ ಸೇವೆಗಾಗಿ ಸುರೇಶ್ ರೋಟೆ, ಬಾಬಾಜಿ ಶೆಟ್ಟಿ, ಧನಂಜಯ ಮಗದುಂ ಅವರಿಗೆ ಸಮಾಜ ಭೂಷಣ ಪ್ರಶಸ್ತಿಯೊಂದಿಗೆ ರಜತ ಕಲಶ ನೀಡಿ ಗೌರವಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಎಸ್.ಬಿ.ಯಶಸ್, ಅಜಿತ್ ಗುಂಜಾಳ್, ಎಚ್.ಪಿ.ಅಶೋಕ್‌ಕುಮಾರ್, ದೇವೇಂದ್ರ ಕುಮಾರ್, ಮಹಾಲಕ್ಷ್ಮೀ ಪ್ರಮೋದ್‌ಕುಮಾರ್, ಬಾನುಕುಮಾರ್, ಜಿ.ಎಂ.ರಾವಣ್ಣವರ್, ಸುನೀಲ್‌ಕುಮಾರ್, ಬಬನ್ ದತ್ತವಾಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net