ಲಕ್ಷ್ಮೀಸಾಗರದ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಸಿ.ಟಿ.ರವಿ ಭೇಟಿ

22-pnp 4
Published on

ಪಾಂಡವಪುರ: ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಶ್ರೀಚಕ್ರ ಸಮೇತ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಮಂಗಳವಾರ ತೆರಳುತ್ತಿದ್ದ ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ತಡೆದು ಸನ್ಮಾನಿಸಿದರು.

ಮೂರನೇ ವರ್ಷದ ಶ್ರಾವಣ ಮಾಸದ ಪೂಜಾ ಕೈಂಕರ್ಯದ ಅಂಗವಾಗಿ ಲಕ್ಷ್ಮೀಸಾಗರದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ತಡೆದ ಬಿಜೆಪಿ ಕಾರ್ಯಕರ್ತರು ಹಾರ ತುರಾಯಿಗಳನ್ನು ಹಾಕಿ ಅಭಿನಂದಿಸಿದರು. ಬಳಿಕ ತೊಣ್ಣೂರು ಕೆರೆಗೆ ತೆರಳಿದ ಮಾಜಿ ಸಚಿವರು, ಕೆರೆ ವೀಕ್ಷಣೆ ಮಾಡಿದರು. ಅಲ್ಲಿಂದ ಗ್ರಾಮದ ನಿಕುಂಬಿಣಿ ದೇವಿ ದರ್ಶನ ಪಡೆದು ಲಕ್ಷ್ಮೀಸಾಗರ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್, ಬಿಜಿಪಿ ಕ್ಷೇತ್ರಾಧ್ಯಕ್ಷ ಎಲ್.ಅಶೋಕ್, ಕಾರ್ಯದಶಿ ಧನಂಜಯ, ಟೌನ್ ಅಧ್ಯಕ್ಷ ಶ್ರೀನಿವಾಸ್ ನಾಯಕ, ಬಳಘಟ್ಟ ಅಶೋಕ್, ಎಸ್‌ಸಿ ಮೋರ್ಚಾದ ತಾಲೂಕು ಅಧ್ಯಕ್ಷ ಮಲ್ಲೇಶ್, ಹಿರಿಯ ಮುಖಂಡ ಮಿಲ್ ತಮ್ಮಣ್ಣ, ಮುಖಂಡರಾದ ಎಸ್.ಎನ್.ಟಿ.ಸೋಮಶೇಖರ್, ಬೀರಶೆಟ್ಟಹಳ್ಳಿ ಸೋಮಶೇಖರ್, ಸೋಮಚಾರಿ, ಡೇರಿ ರಾಮು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net