ಲಕ್ಷ್ಮೀಯರನ್ನು ಭಜಿಸುವವರಿಗೆ ಪುಣ್ಯ ಪ್ರಾಪ್ತಿ

26ydg02
Published on


ಯಾದಗಿರಿ: ಭಕ್ತಿ, ಶ್ರದ್ಧೆ, ನಿಷ್ಠೆಯಿಂದ ಅಷ್ಟಲಕ್ಷ್ಮೀಯರನ್ನು ಪೂಜಿಸುವವರಲ್ಲಿ ಶ್ರೇಷ್ಠ ಭಾವ ಮೂಡುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.

ಅಬ್ಬೆತುಮಕೂರಿನ ಶ್ರೀ ವಿಶ್ವಾರಾಧ್ಯರ ಮಠದಲ್ಲಿ ಅತಿರುದ್ರ ಯಾಗ ಮತ್ತು ಅಷ್ಟಲಕ್ಷ್ಮೀ ಕುಬೇರ ಪೂಜೆ ನಿಮಿತ್ತ ಶರಣ ಸಕ್ರೆಪ್ಪಗೌಡ ಬಯಲು ರಂಗಮಂಟಪದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ಧಾಮರ್ಿಕ ಸಭೆಯಲ್ಲಿ ಪಾವನ ಸಾನ್ನಿಧ್ಯ ವಹಿಸಿದ್ದ ಅವರು, ಧನಲಕ್ಷ್ಮೀ, ಧಾನ್ಯ, ಸಂತಾನ, ವಿದ್ಯಾ, ವಿಜಯ, ಭಾಗ್ಯ, ಗಜ, ಆದಿ ಹೀಗೆ ಎಂಟು ದೇವತೆಗಳನ್ನು ಅಷ್ಟಲಕ್ಷ್ಮೀ ಎಂದು ಆರಾಸುವ ಪದ್ಧತಿ ಭಾರತೀಯ ಪರಂಪರೆಯಲ್ಲಿದೆ. ಇವರನ್ನು ಭಕ್ತಿ ಭಾವದಿಂದ ಪೂಜಿಸಿದರೆ ಇಷ್ಟಾರ್ಥ ನೆರವೇರಿ ಬದುಕು ಸಮೃದ್ಧವಾಗುತ್ತದೆ ಎಂದರು.

ಒಬ್ಬ ಲಕ್ಷ್ಮೀ ಬೇಕಾದರೆ ಇನ್ನೊಬ್ಬ ಲಕ್ಷ್ಮೀ ಬೇಡವೆಂಬ ಭಾವ ನಮ್ಮಲ್ಲಿದೆ. ಅಂದರೆ ಭಾಗ್ಯಲಕ್ಷ್ಮೀಯನ್ನು ಎಲ್ಲರೂ ಬೇಕೆಂದು ಭಾವಿಸುತ್ತಾರೆ. ಅದೇ ದರಿದ್ರಲಕ್ಷ್ಮೀಯನ್ನು ಯಾರೂ ಬೇಕು ಎನ್ನುವುದಿಲ್ಲ. ಭಾರತೀಯ ಪರಂಪರೆಯಲ್ಲಿ ದರಿದ್ರಲಕ್ಷ್ಮೀಯನ್ನೂ ಭಜಿಸುವ ಪದ್ಧತಿ ಇದೆ ಎಂದು ಹೇಳಿದರು.

ಶ್ರೀ ಡಾ.ಗಂಗಾಧರ ಮಹಾಸ್ವಾಮೀಜಿ ಮಾತನಾಡಿ, ಶಿವನನ್ನು ಆರಾಸುವುದು ಅತಿರುದ್ರ ಯಾಗವಾಗುತ್ತದೆ. ಶಿವ ಸಂತೃಪ್ತನಾಗಿದ್ದರೆ ಪ್ರಕೃತಿ ಶಾಂತವಾಗಿರುತ್ತದೆ. ಪ್ರಕೃತಿ ಶಾಂತವಾಗಿದ್ದಷ್ಟು ಮನುಷ್ಯನ ಬದುಕು ಆನಂದಮಯ ಆಗಿರುತ್ತದೆ. ವಿಶ್ವದ ಜನತೆ ಆನಂದಮಯ ಬದುಕಿಗಾಗಿ ಈ ಯಾಗ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬೆಳಗ್ಗೆ 108 ಯಾಗ ಕುಂಡಗಳ ಮುಂದೆ ದಂಪತಿ ಕುಳಿತುಕೊಂಡರೆ, ಪ್ರಧಾನಯಾಗ ಕುಂಡದ ಮುಂದೆ ಶ್ರೀ ಡಾ.ಗಂಗಾಧರ ಮಹಾಸ್ವಾಮೀಜಿ, ಕಿರಿಯ ಸ್ವಾಮಿಗಳಾದ ಶಿವಶೇಖರ ಶ್ರೀ ಆಸೀನರಾಗಿ ಯಾಗದ ಪೂಜೆ ನೆರವೇರಿಸಿದರು. ಗವ್ವಮಠಂ ಡಾ.ವಿಶ್ವನಾಥ ಶಾಸ್ತ್ರಿ ಸೇರಿ ಸುಮಾರು 200 ಋತ್ವಿಜರು ಯಾಗದ ಪೌರೋಹಿತ್ಯ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net