ಲಕ್ಷ್ಮಿ ಹೃದಯ, ನಾರಾಯಣ ಹೋಮ

11-08-Shiva-1
ರಾಯಚೂರಿನ ಕೋಟೆ ಬಡಾವಣೆಯಲ್ಲಿನ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಅಕ ಮಾಸದ ನಿಮಿತ್ತ ಶುಕ್ರವಾರ ಲಕ್ಷ್ಮಿ ಹೃದಯ ಮತ್ತು ನಾರಾಯಣ ಹೋಮ ನಡೆಸಲಾಯಿತು. ಆನಂದಾಚಾರ್, ರಾಮರಾವ್ ದೇಸಾಯಿ, ಗೋವಿಂದ ದಾಸ, ಮುಕುಂದಾಚಾರ್, ಗಿರೀಶ ಆಚಾರ್, ನರಸಿಂಹಾಚಾರ್, ತಿರುಮಲಾಚಾರ್, ಪ್ರಕಾಶ ಆಚಾರ್, ಕೊಪ್ರೇಶ ಆಚಾರ್, ಜಯಕುಮಾರ ಗಬ್ಬೂರು ಇದ್ದರು.
Published on

ರಾಯಚೂರು: ನಗರದ ಕೋಟೆ ಬಡಾವಣೆಯ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಅಕ ಮಾಸದ ನಿಮಿತ್ತ ಜೀತಾಮಿತ್ರ ಭಜನಾ ಮಂಡಳಿ, ಮುಂಗ್ಲಿ ಮುಖ್ಯ ಪ್ರಾಣದೇವರ ಮಹಿಳಾ ಭಜನಾ ಮಂಡಳಿ, ವ್ಯಾಸರಾಜ ಮತ್ತು ರಾಘವೇಂದ್ರ ಭಜನಾ ಮಂಡಳಿಗಳಿಂದ ಶುಕ್ರವಾರ ಲಕ್ಷ್ಮಿ ಹೃದಯ ಮತ್ತು ನಾರಾಯಣ ಹೋಮ ಹಮ್ಮಿಕೊಳ್ಳಲಾಗಿತ್ತು.
ಹೋಮದಲ್ಲಿ ಲಕ್ಷ್ಮಿ ಸನ್ನಿಗೆ 108 ಕಮಲಗಳ ಸಮರ್ಪಣೆ ಮಾಡಲಾಯಿತು. ಕುಂಕುಮಾರ್ಚನೆ ಮತ್ತು ಸೋಬಾನೆ ಪದಗಳ ಗಾಯನ ನಡೆಸಲಾಯಿತು. ಎಲ್ಲರಿಗೂ ಐಶ್ವರ್ಯ, ಅಂತಸ್ತು ನೀಡಲಿ ಹಾಗೂ ಶಾಂತಿ ನೆಲೆಸಲಿ ಎಂದು ಹೋಮದ ಮೂಲಕ ಪ್ರಾರ್ಥನೆ ನಡೆಸಲಾಯಿತು.
ಆನಂದಾಚಾರ್, ರಾಮರಾವ್ ದೇಸಾಯಿ, ಗೋವಿಂದ ದಾಸ, ಮುಕುಂದಾಚಾರ್, ಗಿರೀಶ ಆಚಾರ್ ಹೋಮ ವಿ ವಿಧಾನಗಳನ್ನು ಪೂರೈಸಿದರು. ಈ ಸಂದರ್ಭದಲ್ಲಿ ನರಸಿಂಹಾಚಾರ್, ತಿರುಮಲಾಚಾರ್, ಪ್ರಕಾಶ ಆಚಾರ್, ಕೊಪ್ರೇಶ ಆಚಾರ್, ಜಯಕುಮಾರ ಗಬ್ಬೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net