ಮಂಗಳೂರು: ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆಯನ್ನುಂಟಮಾಡುವ ಹಾಗೂ ಲವ್‌ಜಿಹಾದ್‌ಗೆ ಪ್ರೋತ್ಸಾಹ ನೀಡುವ ಅಂಶಗಳನ್ನು ಒಳಗೊಂಡಿರುವ ‘ಲಕ್ಷ್ಮಿ ಬಾಂಬ್’ ಚಲನಚಿತ್ರವನ್ನು ನಿಷೇಧಿಸಬೇಕು ಎಂದು ಹಿಂದು ಮಹಾಸಭಾ ಕರ್ನಾಟಕ ಆಗ್ರಹಿಸಿದೆ.
ಲಕ್ಷ್ಮಿ ಬಾಂಬ್ ಚಿತ್ರವನ್ನು ಉದ್ದೇಶ ಪೂರ್ವಕವಾಗಿ ದೀಪಾವಳಿ ಸಂದರ್ಭದಲ್ಲೇ ಪ್ರದರ್ಶನ ಮಾಡಲು ಉದ್ದೇಶಿಸಿರುವ ಹಿಂದೆ ದೊಡ್ಡ ಸಂಚು ಅಡಗಿದೆ. ಚಿತ್ರದಲ್ಲಿ ನಾಯಕಿಯ ಹೆಸರು ಪ್ರಿಯಾ ಯಾದವ್ ಮತ್ತು ನಾಯಕನ ಹೆಸರು ಆಸೀಫ್. ಮುಸ್ಲಿಂ ಯುವಕ ಮತ್ತು ಹಿಂದು ಯುವತಿಯ ಸಂಬಂಧವನ್ನು ತೋರಿಸುವ ಮೂಲಕ ಉದ್ದೇಶ ಪೂರ್ವಕವಾಗಿ ಲವ್‌ಜಿಹಾದ್‌ಗೆ ಪ್ರೋತ್ಸಾಹ ನೀಡಿದ್ದಾರೆ. ಆದ್ದರಿಂದ ಚಿತ್ರದ ಮೇಲೆ ನಿರ್ಬಂಧ ಹೇರಬೇಕು ಎಂದು ಹಿಂದು ಮಹಾಸಭಾ ಸಂಸದೀಯ ಕಾರ್ಯದರ್ಶಿ ಧರ್ಮೇಂದ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯಕಾರ್ಯಾಧ್ಯಕ್ಷ ರಾಜೇಶ್ ಪವಿತ್ರನ್, ರಾಜ್ಯ ವಕ್ತಾರ ಜಗನ್ ಕುಮಾರ್, ಜಿಲ್ಲಾಧ್ಯಕ್ಷ ಧನರಾಜ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.