

ಅರಸೀಕೆರೆ: ತಾಲೂಕಿನ ಮಾಡಾಳು ಗ್ರಾಮದ ಹೊರ ವಲಯದಲ್ಲಿರುವ ಶಿವಬಸವ ಆಶ್ರಮದಲ್ಲಿ ಸೋಮವಾರ ತಡರಾತ್ರಿ ಡಕಾಯಿತಿ ನಡೆದಿದ್ದು ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕದ್ದೊಯ್ಯಲಾಗಿದೆ ಎಂದು ತಿಪಟೂರು ಷಡಕ್ಷರ ಮಠದ ಶ್ರೀರುದ್ರಮುನಿ ಸ್ವಾಮೀಜಿ ದೂರಿದ್ದಾರೆ.'
ಕಳೆದ ಕೆಲ ದಿನಗಳಿಂದ ಮಠದ ನಿರ್ವಹಣೆ ಮಾಡುತ್ತಿರುವ ನಾವು ಇಲ್ಲದ ಸಮಯದಲ್ಲಿ ಕೃತ್ಯವೆಸಗಲಾಗಿದೆ.ಸಂಬಂಧ ಬಾಣಾವರ ಗ್ರಾಮಾಂತರ ಠಾಣೆಗೆ ದುರು ನೀಡಲಾಗಿದ್ದು ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದರು.
ವಕೀಲ ನಟರಾಜ್, ಸಂತೋಷ್, ಬಸವರಾಜ್, ಚನ್ನಬಸಪ್ಪ ಗೋಷ್ಟಿಯಲ್ಲಿದ್ದರು.