ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

23Sambargi1
ಖಿಳೇಗಾಂವ ಗ್ರಾಮದಲ್ಲ ಕಳ್ಳತನವಾದ ಮನೆಗೆ ಅಥಣಿ ಪಿಎಸ್‌ಐ ಕುಮಾರ ಹಾಡಕರ ಭೇಟಿ ನೀಡಿ ಪರಿಶೀಲಿಸಿದರು.
Published on

ಸಂಬರಗಿ: ಸಮೀಪದ ಖಿಳೇಗಾಂವದಲ್ಲಿ ಅಂಚೆ ಕಚೇರಿ ಸೇರಿ 6 ಮನೆಗಳ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಬೈಕ್, ಮೇಕೆ ಮರಿ, ಟಿವಿ ಮತ್ತು ನಗದು ಹಣ ದೋಚಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಗ್ರಾಮದ ಸುಶೀಲಾಬಾಯಿ ಹೊನ್ನಾಗೋಳ ಮನೆಯಲ್ಲಿ 25 ಸಾವಿರ ರೂ. ನಗದು, 1 ತೊಲ ಬಂಗಾರದ ಆಭರಣ, ಶೀತಲ್ ಚಂಡಿ ಮನೆಯಲ್ಲಿ 3 ತೊಲ ಬಂಗಾರ, ಸಾಗರ ದಿವಾನಗೋಳ ಮನೆಯ ಎದುರು ನಿಲ್ಲಿಸಿದ್ದ ಬೈಕ್ ಹಾಗೂ ಒಂದು ಮೇಕೆ ಮರಿಯನ್ನು ಕದಿಯಲಾಗಿದೆ. ಅಪ್ಪಾಸಾಹೇಬ ಬಸರಗಿ ಮನೆ ಹಾಗೂ ಅಂಚೆ ಕಚೇರಿಯ ಬೀಗ ಮುರಿದಿದ್ದು, ಏನೂ ಸಿಗದೆ ಮರಳಿದ್ದಾರೆ. ಸ್ಥಳಕ್ಕೆ ಅಥಣಿ ಪಿಎಸ್‌ಐ ಕುಮಾರ ಹಾಡಕರ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net