

ಹಾವೇರಿ: ವಿಚ್ಛೇದಿತ ಮಹಿಳೆಯರೇ ಇವರ ಟಾರ್ಗೆಟ್. ಸ್ವಲ್ಪ ಯಾಮಾರಿದರೂ ಅಂಗೈಯಲ್ಲಿಯೇ ಆಕಾಶ ತೋರಿಸಿ, ಚಿನ್ನ, ರನ್ನ ಎನ್ನುವ ಮಾತಿಗೆ ಮರಳಾದವರಿಗೆ ಹಾಕುತ್ತಿದ್ದ ಲಕ್ಷ ಲಕ್ಷ ರೂ.ಗಳ ಪಂಗನಾಮ. ಈತ ಮಾಡುತ್ತಿದ್ದ ಕೃತ್ಯಕ್ಕೆ ತಾಯಿ, ಸಹೋದರಿಯರೂ ಸಾಥ್ ಕೊಡುತ್ತಿದ್ದರು.
ಹೀಗೆ ಹಲವು ಮಹಿಳೆಯರಿಗೆ ಮೋಸ ಮಾಡಿದ ಆರೋಪಿ ಬಾಗಲಕೋಟೆಯ ರವಿ ಅಶೋಕ ಮುಡ್ಡೆನ್ನವರ (32) ಇದೀಗ ಹಾವೇರಿ ಸೈಬರ್ ಕ್ರೖೆಂ ಪೊಲೀಸರ ಅತಿಥಿಯಾಗಿದ್ದಾನೆ.
ಈತನಿಗೆ ಸಾಥ್ ನೀಡಿದ ತಾಯಿ ಲತಾ ಮುಡ್ಡೆನ್ನವರ ಹಾಗೂ ಸಹೋದರಿ ಸುಧಾ ಮಂಜುನಾಥ ಖೋತ ವಿರುದ್ಧವೂ ದೂರು ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಈತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಖಜಚಛಜಿ.ಟಞನಲ್ಲಿ ತನ್ನ ಪ್ರೊಫೈಲ್ ಕ್ರಿಯೇಟ್ ಮಾಡಿಕೊಂಡು ಬಯೋಡೆಟಾ ಹಾಗೂ ಸುಂದರ ಫೋಟೋಗಳನ್ನು ಅಪಲೋಡ್ ಮಾಡುತ್ತಿದ್ದ. ವಿಚ್ಛೇದಿತ ಅಥವಾ ಪತಿ ಮೃತಪಟ್ಟ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಅವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಪರಿಚಯವಾದ ಒಂದೇ ವಾರದಲ್ಲಿ ‘ನನ್ನ ಹೆಂಡತಿ ನನ್ನನ್ನು ಬಿಟ್ಟು ತವರು ಮನೆ ಸೇರಿದ್ದಾಳೆ. ನಿಮ್ಮನ್ನು ಮದುವೆ ಆಗುತ್ತೇನೆ’ ಎಂದು ನಂಬಿಸುತ್ತಿದ್ದ. ಮಹಿಳೆಯರು ಈತನ ಬಣ್ಣದ ಮಾತಿಗೆ ಮರುಳಾದ ಮರು ಕ್ಷಣವೇ ‘ಪುಣೆಯಲ್ಲಿ ಮನೆ ಕಟ್ಟಿಸುತ್ತಿದ್ದೇನೆ. ಸ್ವಲ್ಪ ಹಣದ ಕೊರತೆಯಾಗಿದೆ. ದಯವಿಟ್ಟು ಸಹಾಯ ಮಾಡಿ’ ಎಂದು ಸುಳ್ಳು ಹೇಳಿ ಲಕ್ಷಾಂತರ ರೂ. ದೋಚಿಸುತ್ತಿದ್ದ.
4ಲಕ್ಷ ರೂ. ಕಳೆದುಕೊಂಡಿದ್ದ ರಾಣೆಬೆನ್ನೂರನ ಶಿಕ್ಷಕಿ ಕಳೆದ ನವೆಂಬರ್ 1ರಂದು ಜಿಲ್ಲೆಯ ರಾಣೆಬೆನ್ನೂರಿನ ಶಿಕ್ಷಕಿಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯಿಂದ ತನ್ನ ಅಲಹಾಬಾದ್ ಬ್ಯಾಂಕ್ ಖಾತೆಗೆ 4 ಲಕ್ಷ ರೂ. ಹಾಕಿಸಿಕೊಂಡಿದ್ದನು. ಮೋಸ ಹೋದ ಶಿಕ್ಷಕಿ ಈ ಕುರಿತು ಹಾವೇರಿ ಸೈಬರ್ ಕ್ರೖೆಂ ಪೊಲೀಸರಿಗೆ ದೂರು ನೀಡಿದ್ದಳು. ಪ್ರಕರಣದ ತನಿಖೆ ಕೈಗೊಂಡ ಸಿಪಿಐ ಚಿದಾನಂದ ಹಾಗೂ ತಂಡದವರು ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಆರೋಪಿ ರವಿ ಇನ್ನೂ ಕೆಲ ಮಹಿಳೆಯರಿಗೆ ಮೋಸ ಮಾಡಿರುವ ಸಂಶಯವಿದ್ದು, ತನಿಖೆಯಿಂದ ಬಯಲಾಗಲಿದೆ ಎಂದು ಪೊಲೀಸ್ ಮೂಲ ತಿಳಿಸಿದೆ. ಪಿಎಸ್ಐ ಜೆ.ಕೆ. ಬಳೆಗಾರ, ಸಿಬ್ಬಂದಿ ಆನಂದ ದೊಡ್ಡಕುರಬರ, ಎಂ.ಜಿ. ಎರೆಸೀಮಿ, ಮಂಜುನಾಥ, ಪುಟ್ಟಪ್ಪ ಈಳಿಗೇರ, ಶಿವಾನಂದ ಜಾಡರ ಕಾರ್ಯಾಚರಣೆಯಲ್ಲಿದ್ದರು.