ಲಕ್ಷ ತೆಂಗಿನ ಸಸಿ ಬೆಳೆಸುವ ಗುರಿ

1lakh coconut plantetion
ಕೋಲಾರದಲ್ಲಿ ರೋಟರಿ ಲಕ್ಷ ಕಲ್ಪವೃಕ್ಷ ಕಾರ್ಯಕ್ರಮಕ್ಕೆ ಕೋಲಾರ ನಂದಿನಿ ಸಂಸ್ಥೆಯ ಜಿಲ್ಲಾಪಾಲಕ ರಾಮಚಂದ್ರಪ್ಪ ಚಾಲನೆ ನೀಡಿದರು. ರೋಟರಿ ಅಧ್ಯಕ್ಷ ಕೆ.ವಿ.ಶಂಕರಪ್ಪ, ಸ್ಕೌಟ್ಸ್ನ ಜಿಲ್ಲಾ ಸಹ ಕಾರ್ಯದರ್ಶಿ ಬಾಬು, ರೋಟರಿ ೩೧೯೧ ನಿರ್ದೇಶಕ ರವೀಂದ್ರನಾಥ್ ಇತರರು ಇದ್ದರು.
Published on

ಕೋಲಾರ: ಜಿಲ್ಲೆಯಲ್ಲಿ ಈ ವರ್ಷ ಒಂದು ಲಕ್ಷ ತೆಂಗಿನ ಸಸಿಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ ಎಂದು ರೋಟರಿ ಕೋಲಾರ ನಂದಿನಿ ಸಂಸ್ಥೆಯ ಜಿಲ್ಲಾಪಾಲಕ ರಾಮಚಂದ್ರಪ್ಪ ತಿಳಿಸಿದರು.
ನಗರದ ಸ್ಕೌಟ್ಸ್ ಭವನದ ಆವರಣದಲ್ಲಿ ರೋಟರಿ ಕೋಲಾರ ನಂದಿನಿ ಮತ್ತು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಗುರುವಾರ ಆಯೋಜಿಸಿದ್ದ ರೋಟರಿ ಲಕ್ಷ ಕಲ್ಪವೃಕ್ಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತೆಂಗಿನ ಸಸಿ ನೆಟ್ಟು ಪ್ರತಿಯೊಬ್ಬರೂ ಆರೋಗ್ಯ ಮತ್ತು ಆರ್ಥಿಕವಾಗಿ ಸಬಲರಾಗಬಹುದು. ಭಾರತೀಯರು ಕಲ್ಪವೃಕ್ಷವೆಂದು ಪೂಜಿಸುವ ತೆಂಗಿನ ಮರವನ್ನು ಮನೆ, ಜಮೀನುಗಳ ಬಳಿ ಬೆಳೆಸಲು ಮುಂದಗಬೇಕು. ರೈತರು ತಮ್ಮ ಜಮೀನುಗಳ ಸುತ್ತ ತೆಂಗಿನ ಸಸಿಗಳನ್ನು ನೆಟ್ಟು ಆರ್ಥಿಕವಾಗಿ ಮುಂದೆ ಬರಬೇಕು ಎಂದರು.
ಇದೊಂದು ಮಹಾನ್ ಕಾರ್ಯವಾಗಿದ್ದು, ಇದಕ್ಕೆ ಜಿಲ್ಲೆಯ ಜನ ಸಹಕರಿಸಬೇಕು. ಒಂದು ಕಾಲದಲ್ಲಿ ಬರಡು ಜಿಲ್ಲೆ ಎಂಬ ಅಪಖ್ಯಾತಿ ಹೊಂದಿದ್ದು, ಮುಂದಾದರೂ ಹಸಿರು ಜಿಲ್ಲೆಯನ್ನಾಗಿಸಬೇಕು ಎಂದು ತಿಳಿಸಿದರು.
ರೋಟರಿ ಅಧ್ಯಕ್ಷ ಕೆ.ವಿ.ಶಂಕರಪ್ಪ ರೈತರಿಗೆ ಸಸಿಗಳನ್ನು ವಿತರಿಸಿ ಮಾತನಾಡಿ, ರೈತರಿಗೆ ತುಂಬಾ ಅನುಕೂಲಕರವಾದ ತೆಂಗಿನ ಸಸಿಗಳ ವಿತರಣೆ, ಹಸುಗಳ ವಿತರಣೆ, ಆರೋಗ್ಯ ಶಿಬಿರಗಳನ್ನು ಆಯೋಜಿಸುವುದು, ಮತ್ತು ಬೆಳೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಗಾರಗಳನ್ನು ನಡೆಸಲಾಗುತ್ತಿದೆ. ಇದರ ಪ್ರಯೋಜನವನ್ನು ರೈತರು ಪಡೆದು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಆಧುನಿಕ ವಿಧಾನಗಳನ್ನು ರೈತರು ಅಳವಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚು ಸಂಪಾದನೆ ಮಾಡಬೇಕು ಎಂದು ತಿಳಿಸಿದರು.
ಸ್ಕೌಟ್ಸ್ನ ಜಿಲ್ಲಾ ಸಹ ಕಾರ್ಯದರ್ಶಿ ಬಾಬು, ರೋಟರಿ ೩೧೯೧ ನಿರ್ದೇಶಕ ರವೀಂದ್ರನಾಥ್, ಜಂಟಿ ಕಾರ್ಯದರ್ಶಿ ಉಮಾದೇವಿ, ರೋಟರಿ ಕೋಲಾರ ನಿರ್ದೇಶಕರಾದ ಮೇಶ್ ನಾಯಕ್, ವಿಶ್ವನಾಥ್, ಕುಮಾರ್,ಚೇತನ್, ಸುರೇಶ್, ಶ್ರೀರಾಮಪ್ಪ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net