

ಯಾದಗಿರಿ: ನಗರದಲ್ಲಿ ಪ್ರತಿಪ್ಠಾಪಿಸಿರುವ ಗಣೇಶ ವಿಗ್ರಹಗಳ ಪೈಕಿ ಭಾನುವಾರ ರಾತ್ರಿ ೯ನೇ ದಿನದ ೧೯ ವಿನಾಯಕ ಮೂರ್ತಿಗಳ ವಿಸರ್ಜನೆ ಸಡಗರ, ಸಂಭ್ರಮದಿAದ ಮತ್ತು ಶಾಂತಿಯುತವಾಗಿ ಇಲ್ಲಿನ ಲುಂಬಿನಿ ವನದ ಕೆರೆಯಲ್ಲಿ ವಿಸರ್ಜಿಸಲಾಯಿತು.
ಇಲ್ಲಿನ ವಿವಿಧ ಬಡಾವಣೆಗಳಲ್ಲಿನ ಮತ್ತು ವೃತ್ತಗಳಲ್ಲಿ ಕೂಡಿಸಲಾಗಿದ್ದ ಗಣೇಶ ವಿಗ್ರಹಗಳ ವಿಸರ್ಜನೆಗಾಗಿ ಭಾನುವಾರ ಬೆಳಗ್ಗೆಯಿಂದ ಮೆರವಣಿಗೆ ತಯಾರಿ ಮಾಡಿಕೊಂಡ ಮಂಡಳಿ ಪ್ರಮುಖರು ಮತ್ತು ಯುವಕರು ಸಂಜೆಯಾಗುತ್ತಲೇ ವಿಶೇಷ ಪೂಜೆ ಸಲ್ಲಿಸಿ ಮಂಟಪದಲ್ಲಿನ ಗಣೇಶ ವಿಗ್ರಹವನ್ನು ವಾಹನಗಳಲ್ಲಿ ಕೂಡಿಸಿಕೊಂಡು ಮೆರವಣಿಗೆ ಹೊರಟರು.
ದಾರಿಯುದ್ದಕ್ಕೂ ವಿವಿಧ ವಾದ್ಯಗಳ ತಾಳಕ್ಕೆ ನೃತ್ಯ ಮಾಡುತ್ತ ಮತ್ತು ಜೈಕಾರ ಹಾಕುತ್ತ ಲುಂಬಿನಿ ವನದ ಕೆರೆಗೆ ಬಂದು ಅಲ್ಲಿ ಗಣೇಶನಿಗೆ ಮತ್ತೊಮ್ಮೆ ಆರತಿ ಮಾಡಿ ಒಂದೋದಾಗಿ ವಿಸರ್ಜನೆ ಮಾಡಿದರು.
ಮೆರವಣಿಗೆಯಲ್ಲಿ ವೃದ್ಧರು, ಯುವಕರು, ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರಾತ್ರಿ ೧೨ರವರೆಗೂ ವಿಸರ್ಜನೆ ಕಾರ್ಯ ನಡೆಯಿತು.