ಲಂಚ ಸ್ವೀಕರಿಸಿದ ವಿಎ ಸಹಾಯಕಿ ಖಾಕಿ ಬಲೆಗೆ

Published on

ಹೊಸೂರು: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ ಗ್ರಾಮ ಆಡಳಿತ ಅಧಿಕಾರಿ ಹಾಗೂ ಸಹಾಯಕಿ ರೈತರೊಬ್ಬರಿಗೆ ಜಮೀನು ವಾರಸುದಾರಿಕೆ ಪ್ರಮಾಣ ಪತ್ರ ನೀಡಲು 4 ಸಾವಿರ ರೂ. ಲಂಚ ಸ್ವೀಕರಿಸಿ ಭ್ರಷ್ಟಾಚಾರ ನಿಗ್ರಹ ಪೊಲೀಸರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಡೆಂಕಣಿಕೋಟೆ ಗ್ರಾಮಾಧಿಕಾರಿ ತಂಬಿದೊರೈ, ಸಹಾಯಕಿ ಪುಷ್ಪಾ ಬಂಧಿತರು. ಬಲ್ಲಪಲ್ಲಿಯ ಇ.ಮುರುಗೇಶನ್ ಎಂಬುವವರು ಗ್ರಾಮದ ಸರ್ವೇ ನಂ.21/2ರಲ್ಲಿನ ಎಕರೆ ಜಮೀನಿನ ಉತ್ತರಾಧಿಕಾರ ಪ್ರಮಾಣ ಪತ್ರ ಕೋರಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು. ಪ್ರಮಾಣ ಪತ್ರ ನೀಡಲು ಗ್ರಾಮಾಡಳಿತ ಅಧಿಕಾರಿ ಮತ್ತು ಸಹಾಯಕಿಯು 4 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುರುಗೇಶನ್ ದೂರಿನ ಹಿನ್ನೆಲೆ ಕೃಷ್ಣಗಿರಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಇನ್‌ಸ್ಪೆಕ್ಟರ್ ಪ್ರಭು ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net