ಲಂಚ ಪಡೆದವರಿಗೆ ಕಾರಾಗೃಹ ಶಿಕ್ಷೆ

Published on

ತುಮಕೂರು: ಲಂಚ ಪಡೆದ ಅಪರಾಧಿಗಳಿಗೆ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂರೂವರೆ ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಮತ್ತು 40 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಕುಣಿಗಲ್​ ತಾಲೂಕು ಹುಲಿಯೂರುದುರ್ಗದ ಕೆಂಪೇಗೌಡ ಅನುದಾನಿತ ಪ್ರೌಢಶಾಲೆ ದ್ವೀತಿಯ ದರ್ಜೆ ಸಹಾಯಕ ಗೋಪಾಲಸ್ವಾಮಿ ಹಾಗೂ ಸಣಬನಘಟ್ಟ ರಾಜೇಂದ್ರ ಪ್ರಸಾದ್​ ಅನುದಾನಿತ ಪ್ರೌಢಶಾಲೆ ನಿವೃತ್ತ ದ್ವೀತಿಯ ದರ್ಜೆ ಸಹಾಯಕ ಬೆಟ್ಟಸ್ವಾಮಿ ಅವರಿಗೆ ನಿವೃತ್ತಿ ನಂತರದ ಸೌಲಭ್ಯಗಳಾದ ರಜೆ ನಗದೀಕರಣ, ಜಿಎಸ್​ಎಲ್​ಐ ಮಂಜೂರಾತಿಗಾಗಿ 25 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟು, 2021ರಂದು ೆ.12ರಂದು 5 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಲೋಕಾಯುಕ್ತ ಸಂಸ್ಥೆ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಆರ್​.ಪಿ.ಪ್ರಕಾಶ್​ ವಾದ ಮಂಡಿಸಿದ್ದರು. ಭ್ರಷ್ಟಾಚಾರ ನಿಗ್ರಹದಳ ಪೊಲೀಸ್​ ಠಾಣೆ ಪೊಲೀಸ್​ ನಿರೀಕ್ಷಕರಾದ ಎಸ್​.ವಿಜಯಲಕ್ಷಿ$್ಮ ಹಾಗೂ ವೈ.ಸತ್ಯನಾರಾಯಣ

ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net