ಲಂಚ ಪಡೆದ ಇಬ್ಬರು ಲೋಕಾ ಬಲೆಗೆ

Published on

ತುಮಕೂರು: ಲಂಚ ಸ್ವೀಕಾರ ಪ್ರಕರಣವೊಂದರಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಸೋಮವಾರ

ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಪ ನಿಬಂಧಕ ಸಣ್ಣಪಯ್ಯ ಮತ್ತು ಪ್ರಥಮ ದರ್ಜೆ ಸಹಾಯಕ ರಾಘವೇಂದ್ರ ಬಂಧಿತರು. ಶಿರಾ ತಾಲೂಕಿನ ಎಲೆಯೂರು ಗ್ರಾಮದ ಮೀನುಗಾರಿಕೆ ಸಹಕಾರ ಸಂಘದ ಬ್ಲಾಕ್​ ಮಾಡಿದ್ದ ಖಾತೆಯನ್ನು ಪುನ@ ತೆರೆಯಲು ಅಧಿಕಾರಿಗಳು 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು

ಎನ್ನಲಾಗಿದ್ದು, ಈ ವಿಚಾರವಾಗಿ ಮೀನುಗಾರಿಕೆ ಸಂಘದ ಪದಾಧಿಕಾರಿ ರವೀಶ್​ ಲೋಕಾಯುಕ್ತರಿಗೆ ದೂರು ನೀಡಿದ್ದರು. ಅದರಂತೆ ಸೋಮವಾರ ದಾಳಿ ನಡೆಸಿದ ಲೋಕಾಯುಕ್ತರು ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ವಶಕ್ಕೆ ಪಡೆದು ಪ್ರಕರಣ

ದಾಖಲಿಸಿಕೊಂಡಿದ್ದಾರೆ. ಲೋಕಾಯುಕ್ತ ಎಸ್ಪಿ ಲಕ್ಷಿ$್ಮನಾರಾಯಣ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸಂತೋಷ್​ ನೇತೃತ್ವದಲ್ಲಿ ಇನ್​ಸ್ಪೆಕ್ಟರ್​ಗಳಾದ ರಾಜು, ಸಲೀಂ, ಸುರೇಶ್​, ಶಿವ ರುದ್ದಪ್ಪ ದಾಳಿಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net