ಲಂಕೇಶ್,ಎರಡು ದಶಕಗಳ ಕಾಲ ವಿದ್ಯಾಮಾನಗಳನ್ನು ಪ್ರಭಾವಿಸಿದ ಲೇಖಕ

CTD P.LANKESH----...
Published on

ಚಿತ್ರದುರ್ಗ: ಲಂಕೇಶ್ ಒಂದು ಹೆಸರಲ್ಲ,ಕರ್ನಾಟಕದಲ್ಲಿ ಜರುಗಿದ ವಿದ್ಯಮಾನವೆಂದು ಶಿವಮೊಗ್ಗದ ಪ್ರಾಧ್ಯಾಪಕ ಬಿ.ಎಲ್.ರಾಜು ಹೇಳಿದರು.ಚಿತ್ರದುರ್ಗ ಗೆಳೆಯರ ಬಳಗ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ‘ಪಿ.ಲಂಕೇಶ್ ಹಾಗೂ ಪ್ರಸ್ತುತ ಸಾಂಸ್ಕೃತಿಕ ವಿದ್ಯಮಾನ’ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ,20ನೇ ಶತಮಾನದ ಕೊನೆಯ 2 ದಶಕಗಳ ಕಾಲ ಲಂಕೇಶ್, ರಾಜ್ಯದ ಅನೇಕ ವಿದ್ಯಮಾನಗಳನ್ನು ಅತ್ಯಂತ ಗಾಢ ವಾಗಿ ಪ್ರಭಾವಿಸಿದ್ದಾರೆ.

ಕವಿ,ನಾಟಕಕಾರ,ಸಿನಿಮಾ ನಿರ್ದೇಶಕ,ಕಥೆ,ಕಾದಂಬರಿಕಾರ ಹಾಗೂ ಪತ್ರಕರ್ತರಾಗಿದ್ದ ಲಂಕೇಶ್ ಅವರ,ಪತ್ರಿಕೆಯನ್ನು ಓದುಗರು ತಮ್ಮ ಜತೆಗೆ ಗುರುತಿಸಿಕೊಂಡಿದ್ದರು. ಅವರ ಪತ್ರಿಕೆಯ ಓದುಗರಿಗೆ ಪ್ರಜ್ಞಾವಂತರೆಂಬ ಇಮೇಜ್ ಇತ್ತು. ಪತ್ರಿಕೆ ಮೂಲಕ ಅನೇಕ ಪ್ರಜ್ಞಾವಂತರು,ಸಾಹಿತಿ ಗಳನ್ನು ಲಂಕೇಶ್ ಜೋಡಿಸಿದರು.

1980ರಿಂದ 20 ವರ್ಷಗಳ ಕಾಲ ಜಾಹೀರಾತಿಲ್ಲದೆ ನಿರ್ಭೀತ,ನಿಷ್ಠುರವಾಗಿ ಪತ್ರಿಕೆ ರೂಪಿಸಿಕೊಂಡು ಬಂದರು. ಕರ್ನಾಟಕದ ರಾಜಕಾರಣವನ್ನು ನೇರ-ನಿಷ್ಠುರವಾಗಿ ಟೀಕಿಸುವ,ವಿಮರ್ಶಿಸುವ ಕೆಲಸ ಮಾಡಿದರು. ಆಳುವ ಸರ್ಕಾರಗಳ ಅನೇಕ ಕರ್ಮಕಾಂಡಗಳನ್ನು ಬಯಲಿಗೆಳೆದರು .ಅ ಧಿಕಾರಸ್ಥರು,ಪಟ್ಟಭದ್ರರ ವಿರುದ್ಧ ಮುಖಾಮುಖಿಯಾಗಿ ನಿಲ್ಲುತ್ತಿದ್ದ ಲಂಕೇಶ್ ವಿರೋಧ ಪಕ್ಷವಾಗಿದ್ದವರು. ರಾಜಕಾರಣ ನಿಂತ ನೀರಾಗಬಾರ ದೆಂಬ ನಿಲುವು ಅವರದ್ದಾಗಿತ್ತು.

ಅವರು ಜಾಹ್ನವಿ,ಬಿ.ಟಿ.ಲಲಿತಾನಾಯ್ಕ,ಸಾರಾ ಅಬೂಬಕರ್ ಸೇರಿದಂತೆ ಅನೇಕ ಲೇಖಕರನ್ನು ಸೃಷ್ಟಿ ಮಾಡಿದರು. ಮೊಗಳ್ಳಿಗಣೇಶ್,ಸಿದ್ದಲಿಂಗ ಯ್ಯ,ದೇವನೂರು ಮಹಾದೇವ ಮತ್ತಿತರರು ಪತ್ರಿಕೆಗೆ ಬರೆದರು. ಆದರೆ ಲಂಕೇಶ್ ಅವರ ಪ್ರಜ್ಞಾವಂತಿಕೆ,ನಿಷ್ಠುರತೆ ನಮ್ಮ ತಲೆಮಾರುಗಳಿಗೆ ಮುಂದುವರಿಯಲಿಲ್ಲವೆ ಎಂದು ಬೇಸರದಿಂದ ಪ್ರಶ್ನಿಸಿದರು. ಕರ್ನಾಟಕದ ರಾಜಕಾರಣದಲ್ಲಿಂದು ತತ್ವಬದ್ಧ,ಜನಪರ ರಾಜಕಾರಣಿಗಳು ಇಲ್ಲ ವಾಗಿದ್ದಾರೆ ಎಂದು ವಿಷಾದಿಸಿದರು.

ಕಥೆಗಾರ ಡಾ.ಗಂಗಾಧರಯ್ಯ ಮಾತನಾಡಿ,ಲಂಕೇಶ್ ಓದಿನ ಹುಚ್ಚು ಹಿಡಿಸಿದ ಪತ್ರಿಕೆ. ಸಿನಿಮಾ, ಕ್ರೀಡೆ,ರಾಜಕಾರಣ, ಟೀಕೆ-ಟಿಪ್ಪಣಿ ಸೇರಿದಂ ತೆ ಅನೇಕ ವಿಷಯಗಳನ್ನೂ ಹೇಳುತ್ತಿತ್ತು. ರಾಮ್‌ಮನೋಹರ ಲೋಹಿಯಾರ ಆಲೋಚನೆಗಳನ್ನು,ತನ್ನ ಬದುಕು ಮತ್ತು ಬರಹದಲ್ಲಿ ರೂಢಿಸಿ ಕೊಂಡ ಬಹಳ ದೊಡ್ಡ ಲೇಖಕ ಲಂಕೇಶ್,ಬರೆದಂತೆ ಬದುಕಿ ತೋರಿಸಿದರು. ಅತ್ಯಂತ ಸರಳವಾಗಿ,ಸಂಕೀರ್ಣವಾದುದನ್ನು ಹೇಳಲಿಕ್ಕೆ ಸಾಧ್ಯವಾ ದುದು ಲಂಕೇಶ್‌ಗೆ ಮಾತ್ರ, ಅವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು.ಅವರ ಸಾಹಿತ್ಯವನ್ನು ವಿಶ್ವವಿದ್ಯಾಲಯಗಳು,ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಹೆಚ್ಚಾಗಿ ಬಳಸಿಕೊಳ್ಳಬೇಕಿದೆ ಎಂದರು.

ಸರ್ಕಾರಿ ಕಲಾ ಕಾಲೇಜು ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಜೆ.ಕರಿಯಪ್ಪ ಮಾಳಿಗೆ,ಗೆಳೆಯರ ಬಳಗದ ಗೌನಹಳ್ಳಿ ಗೋವಿಂದಪ್ಪ,ಸಾಹಿತಿ ಪರಮೇಶ್ವರಪ್ಪ ಕುದುರಿ, ಸಂಶೋಧನಾ ವಿದ್ಯಾರ್ಥಿ ಬಿ.ಪಿ.ಸಂತೋಷ್‌ಕುಮಾರ್‌ಬೆಳಗಟ್ಟ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net