ಲAಬೋದರನ ಪೂಜೆಯಿಂದ ಇಷ್ಟಾರ್ಥ ಈಡೇರಿಕೆ

ydg03
Published on

ಕೊಡೇಕಲ್: ಎಲ್ಲ ದೇವತೆಗಳಲ್ಲಿ ಮೊದಲ ಪೂಜೆಗೊಳ್ಳುವ ವಿಘ್ನವಿನಾಶಕ ಗಣೇಶನನ್ನು ಪೂಜಿಸುವುದರಿಂದ ಸಕಲ ಇಷ್ಠಾರ್ಥಗಳು ಈಡೇರುತ್ತವೆ ಎಂದು ಪುರೋಹಿತರಾದ ಜಗನ್ನಾಥ ಆಚಾರ್ಯ ಜ್ಯೋಶಿ ಹೇಳಿದರು.

ಗ್ರಾಮದ ವರ್ತಕರ ಸಂಘದಿAದ ಪ್ರತಿಷ್ಠಾಪಿಸಿರುವ ಗಣೇಶನಿಗೆ ಬುಧವಾರ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಹಲವು ವರ್ಷದಿಂದ ಗ್ರಾಮದಲ್ಲಿ ವರ್ತಕರು ಸೇರಿ ಪ್ರತಿಷ್ಠಾಪಿಸುತ್ತಿರುವ ಗಣೇಶ ಉತ್ಸವ ವರ್ಷದಿಂದ ವರ್ಷಕ್ಕೆ ಮೆರಗು ಪಡೆಯುತ್ತಿದೆ. ಪ್ರತಿ ವರ್ಷವು ಶಾಲಾ ಮಕ್ಕಳಿಗಾಗಿ ವಿವಿಧ ಸ್ಪರ್ಧೆ ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿರುವುದು ಶ್ಲಾಘನೀಯ ಎಂದರು.

ಬಸಣ್ಣ ತುಂಬಗಿ, ಬಸಣ್ಣ ಕಕ್ಕೇರಿ, ಸುರೇಶ ದೇವೂರ, ಶಿವಣ್ಣ ಮದಲಿಂಗನಾಳ, ಹಣಮೇಶ ಯಡ್ಡಿ, ಶಿವರಾಜ ಯಡ್ಡಿ, ಸಿದ್ರಾಮ ತುಂಬಗಿ, ಪಂಚಯ್ಯ ಸ್ವಾಮಿ, ಅಯ್ಯಪ್ಪ ಪಡಶೆಟ್ಟಿ, ಬಸಣ್ಣ ಬಾವೂರ, ಗೌಡಪ್ಪ, ಗುರಣ್ಣ ವಿಜಾಪುರ, ತಿಪ್ಪಣ್ಣ ದ್ಯಾಮನಾಳ, ಬಸಣ್ಣ ಧನ್ನೂರ, ಸಂಗಣ್ಣ ಧನ್ನೂರ, ಸುರೇಶ ಬೇಕರಿ, ಸಂಗಣ್ಣ ಮುತ್ತಗಿ, ಮಡಿವಾಳಪ್ಪ ತಮದಡ್ಡಿ ಇತರರಿದ್ದರು.

ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಬುಧವಾರ ಭಕ್ತರಿಗಾಗಿ ಹೋಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net