

ಬಳ್ಳಾರಿ : ವಿದ್ಯಾರ್ಥಿಗಳು ರ‌್ಯಾಗಿಂಗ್ ಮಾಡುವುದು ಅಕ್ಷಮ್ಯ ಅಪರಾಧವಾಗಿದ್ದು, ಮಾಡಿದ ಮತ್ತು ಪ್ರಚೋಧಿಸಿದವರಿಗೆ ಜಾಮೀನು ರಹಿತ ಬಂಧನ ಶಿಕ್ಷೆಯಿದೆ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಜೆ. ತಿಪ್ಪೇರುದ್ರಪ್ಪ ಎಚ್ಚರಿಸಿದರು.
ಇಲ್ಲಿನ ವಿಎಸ್‌ಕೆ ವಿವಿಯಲ್ಲಿ ಧನಸಹಾಯ ಆಯೋಗದ ಸೂಚನೆಯಂತೆ ವಿವಿಯ ಆ್ಯಂಟಿ ರ‌್ಯಾಗಿಂಗ್ ಕೋಶದ ವತಿಯಿಂದ ವಿದ್ಯಾರ್ಥಿಗಳಲ್ಲಿ ರ‌್ಯಾಗಿಂಗ್ ವಿರುದ್ಧ ಅರಿವು ಮೂಡಿಸಲು ಏರ್ಪಡಿಸಿದ್ದ ಆ್ಯಂಟಿ ರ‌್ಯಾಗಿಂಗ್ ವಾರಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರ‌್ಯಾಗಿಂಗ್ ಎಂಬ ಪಿಡುಗನ್ನು ತೊಡೆದುಹಾಕಲು ಎಲ್ಲ ವಿದ್ಯಾರ್ಥಿಗಳು ಸೇನಾನಿಗಳಾಗಬೇಕು. ರ‌್ಯಾಗಿಂಗ್‌ಗೆ ಒಳಪಡುವ ವ್ಯಕ್ತಿಯಷ್ಟೆ ಅಲ್ಲದೇ ಅದನ್ನು ನೋಡಿರುವ ವಿದ್ಯಾರ್ಥಿಗಳು ಇದರ ವಿರುದ್ಧ ಧ್ವನಿ ಎತ್ತಬೇಕು ಎಂದರು.
ಬಳಿಕ ವಿಶ್ವಸಂಸ್ಥೆಯಿಂದ ಘೋಷಿಸಲ್ಪಟ್ಟಿರುವ ಅಂತರಾಷ್ಟ್ರೀಯ ಯುವ ದಿನ ಆ.12 ನ್ನು ಎನ್‌ಎಸ್‌ಎಸ್ ಮತ್ತು ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವ್ಯಸನ ಮುಕ್ತ ಭಾರತ ಎಂಬ ಪ್ರತಿಜ್ಞೆಯನ್ನು ರಾಜ್ಯಶಾಸ್ತ ವಿಭಾಗದ ಸಹಾಯಕ ಪ್ರೊ. ಡಾ.ಮೋಹನ್ ದಾಸ್ ಬೋಧಿಸಿದರು.
ಪ್ರಮುಖರಾದ ಆ್ಯಂಟಿ ರ‌್ಯಾಗಿಂಗ್ ಕೋಶದ ಸಂಯೋಜಕ ಡಾ.ವಿರೇಂದ್ರ ಕುಮಾರ್, ಎನ್‌ಎಸ್‌ಎಸ್ ಸಂಯೋಜಕ ಡಾ.ಕುಮಾರ, ಯುವ ರೆಡ್ ಕ್ರಾಸ್ ಸಂಯೋಜಕನ ಡಾ.ರಾಜೇಂದ್ರ ಪ್ರಸಾದ ಇದ್ದರು.