ಕೊಳ್ಳೇಗಾಲ: ಜಿಲ್ಲಾ ಪ್ರಗತಿಪರ ಸಂಘಟನೆ ಒಕ್ಕೂಟ ಸಂಚಾಲಕ ಶೇಖರ್ ಬುದ್ಧ ಅಲಿಯಾಸ್ ಸಣ್ಣ ವಿರುದ್ಧ ರೌಡಿಶೀಟರ್ ತೆರೆಯುವ ಸಂಬಂಧ ಪಟ್ಟಣ ಠಾಣೆ ಪೊಲೀಸರು ನೋಟಿಸ್ ನೀಡಿ 15 ದಿನಗಳ ಒಳಗೆ ಸಮಜಾಯಿಷಿ ನೀಡಲು ಸೂಚಿಸಿದ್ದಾರೆ.
ಮುಖಂಡ ಶೇಖರ್ ಬುದ್ಧ ವಿರುದ್ಧ ದಾಖಲಾಗಿ ಖುಲಾಸೆ ಆಗಿರುವ ಪ್ರಕರಣಗಳು, ವಿಚಾರಣೆಯಲ್ಲಿರುವ ಪ್ರಕರಣಗಳು ಮತ್ತು ಭರಚುಕ್ಕಿ ಜಲಪಾ ತೋತ್ಸವಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಂದ ಸಂದರ್ಭದಲ್ಲಿ ತನ್ನ ಸಹಚರನ ಮೂಲಕ ಕಪ್ಪು ಭಾವುಟ ಪ್ರದರ್ಶನ ಮಾಡಿದ್ದಕ್ಕಾಗಿ ಮತ್ತು ಇತ್ತೀಚೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಪೂರ್ವಭಾವಿ ಸಭೆಗೆ ಶಾಸಕರು ಹಾಜರಾಗದೆ ಇರುವ ಸಂಬಂಧ ಇನ್ನಿತರ ಕಾರಣಗಳಿಗಾಗಿ ಸಮಾಜದ ಸ್ವಾಸ್ಥ್ಯ ಹದಗೆಡಿಸಿ ಪ್ರಚೋದನೆ ನೀಡುತ್ತಿದ್ದೀರಾ ಹಾಗಾಗಿ ಆಗಿಂದಾಗ್ಗೆ ನಿಮ್ಮ ಮೇಲೆ ನಿಗಾವಹಿಸಬೇಕಾಗಿರುವುದರಿಂದ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲು ಈ ನೋಟಿಸ್ ನೀಡುತ್ತಿದ್ದು, 15 ದಿನದೊಳಗೆ ಸಮಜಾಯಿಷಿ ನೀಡಬೇಕೆಂದು ತಿಳಿಸಿದ್ದಾರೆ.