ರೌಡಿಶೀಟರ್ಸ್‌,ಎಂಒಬಿಗಳ ಮೇಲೆ ನಿಗಾಕ್ಕೆ ತಾಕೀತು

CTD SP----
Published on

ಚಿತ್ರದುರ್ಗ: ಠಾಣಾ ವ್ಯಾಪ್ತಿಯಲ್ಲಿರುವ ರೌಡಿಶೀಟರ್ಸ್‌,ಎಂಒಬಿಗಳ ಮೇಲೆ ನಿಗಾ ವಹಿಸುವಂತೆ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ನಗರ ಠಾ ಣೆ ಅಧಿಕಾರಿಗಳಿಗೆ ಸೂಚಿಸಿದರು.

ವಾರ್ಷಿಕ ಪರಿವೀಕ್ಷಣೆ ಅಂಗವಾಗಿ ಬುಧವಾರ ನಗರ ಠಾಣೆಗೆ ಭೇಟಿ ನೀಡಿ,ಅಧಿಕಾರಿಗಳ ಸಭೆ ನಡೆಸಿ ದ ಅವರು, ಕಾನೂನು-ಸುವ್ಯ ವಸ್ಥೆ ನಿರ್ವಹಣೆ ಕಟ್ಟುನಿಟ್ಟಾಗಿರಬೇಕು. ಇದರಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶ ಕೊಡಬಾರ ದು. ನಾನಾ ಕಾರ ಣಗಳಿಂದ ವಶಪಡಿಸಿಕೊಂಡು ವಾಹನ ಮತ್ತಿತರ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇ ಮಾಡಬೇಕು.

ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದಿರುವ ವಾಹನಗಳ ಪೈಕಿ ಹಲವು ಬಹಳ ಹಳೆಯದ್ದಾಗಿದ್ದು,ಅವುಗಳ ವಿಲೇಗೂ ಕೂಡಲೇ ಕ್ರಮವ ಹಿಸಬೇಕೆಂದರು. ಪೆಂಡಿಂಗ್ ಇರುವ ಹಲವು ಕಳವು ಪ್ರಕರಣಗಳ ಪತ್ತೆ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಎಸ್‌ಪಿ,ಕೂಡಲೇ ಪ್ರಕರಣ ಭೇದಿಸಿ ಕಳವು ಮಾಲನ್ನು ವಶಕ್ಕೆ ಪಡೆದು ಮಾಲೀಕರಿಗೆ ಹಿಂತಿರುಗಿಸುವ ನಿಟ್ಟಿನಲ್ಲಿ ನಿಗಾ ವಹಿಸಬೇಕೆಂದರು. ಠಾಣೆ ಆವರಣದಲ್ಲಿ ಕಾಂ ಪೌಂಡ್ ನಿರ್ಮಿಸ ಬೇಕೆಂದು ಸೂಚಿಸಿದರು. ಡಿವೈಎಸ್‌ಪಿ ಪಿ.ಕೆ.ದಿನಕರ್,ಪಿಐ ತಿಪ್ಪೇಸ್ವಾಮಿ,ಪಿಎಸ್‌ಐಗಳಾದ ಗೀತಮ್ಮ,ನಾಗರಾಜ್, ಗಾದಿಲಿಂಗಪ್ಪ ಮತ್ತಿತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net