

ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ರೌಡಿಶೀಟರ್ ರಖಿತಾ ಅಲಿಯಾಸ್ ಗಾಂಜಾ ಗುಂಡನ ಹತ್ಯೆ ಮಾಡಿದ್ದ ಪ್ರಮುಖ ಆರೋಪಿ ಸೇರಿ ನಾಲ್ವರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಭರತ್, ದರ್ಶನ್, ರಂಜನ್, ಮಹೇಶ್ ಬಂಧಿತ ಆರೋಪಿಗಳು.
ನ.13 ರಂದು ನಗರದ ಚನ್ನಪಟ್ಟಣದಲ್ಲಿ ಕುಡಿದ ಮತ್ತಿನಲ್ಲಿ ಶುರುವಾದ ಕ್ಷುಲ್ಲಕ ಜಗಳದಲ್ಲಿ ರೌಡಿಶೀಟರ್ ರಖಿತಾ ಆಲಿಯಾಸ್ ಗಾಂಜಾ ಗುಂಡನನ್ನು (34) ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣವನ್ನುಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಅವರ ಮಾರ್ಗದರ್ಶನದಲ್ಲಿ ನಗರಠಾಣೆ ಇನ್ಸ್‌ಪೆಕ್ಟರ್, ಪಿಎಸ್‌ಐ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ತನಿಖೆಗಿಳಿದ ಪೊಲೀಸರ ತಂಡ ಬಿರುಸಿನ ಕಾರ್ಯಾಚರಣೆ ನಡೆಸಿ ಕೊಲೆ ನಡೆದಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹತ್ಯ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.