

ಕಲಬುರಗಿ: ಪಟ್ಟಣ ಗ್ರಾಮದಲ್ಲಿ ನ.೧೨ರಂದು ನಡೆದ ರೌಡಿಶೀಟರ್ ಸೋಮು ತಾಳಿಕೋಟಿ ಕೊಲೆ ಪ್ರಕರಣದಲ್ಲಿ ಒಂದೇ ಕುಟುಂಬದ ಐವರು ಸೇರಿ ಒಟ್ಟು ಏಳು ಆರೋಪಿಗಳನ್ನು ಸಬ್ ಅರ್ಬನ್ ಪೊಲೀಸರು ಬಂಧಿಸಿದ್ದಾರೆ.
ಅದೇ ಗ್ರಾಮದ ಶರಣಬಸಪ್ಪ ತುಗದಿ(೫೬), ಲಕ್ಷಿö್ಮಪುತ್ರ ತುಗದಿ(೨೮), ಅಣ್ಣಾರಾಯ ತುಗದಿ(೨೨), ಮಾಳಪ್ಪ ಶಿವರಾಯ(೧೯), ಸಿದ್ದಾರೂಢ ತುಗದಿ (೩೧), ಅಣ್ಣಾರಾಯ ತುಗದಿ(೨೪), ಜಗದೀಶ ದತ್ತಾತ್ರೇಯ ಗೋಗಾಂವ್(೩೧) ಬಂಧಿತರು.
ನ.೧೨ರAದು ರಾತ್ರಿ ಅಂಗಡಿಯೊAದರ ಪೂಜೆ ನಿಮಿತ್ತ ಸೋಮು ತಾಳಿಕೋಟಿ ಇಸ್ಪಿಟ್ ಆಡುವ ವೇಳೆ ಕಾರದ ಪುಡಿ ಎರಚಿ, ಮಾರಕಾಸ್ತçಗಳಿಂದ ಕೊಚ್ಚಿ ಕೊಲೆ ಮಾಡಿ, ಆಳಂದ ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿ ಶವ ಎಸೆದು ಪರಾರಿಯಾಗಿದ್ದರು.
ಸೊಲ್ಲಾಪುರಕ್ಕೆ ಪರಾರಿ: ಕೊಲೆ ನಂತರ ಆರೋಪಿಗಳು ರಸ್ತೆ ಮಾರ್ಗವಾಗಿ ಸೋಲ್ಲಾಪುರಕ್ಕೆ ಪರಾರಿಯಾಗಿದ್ದರು. ಖಚಿತ ಮಾಹಿತಿ ಮೇರೆಗೆ ಸಬ್ ಅರ್ಬನ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಂತೋಷ ತಟ್ಟೆಪಲ್ಲಿ ಹಾಗೂ ಸಿಬ್ಬಂದಿ ಸೋಲಾಪುರ-ಅÀಜಲಪುರ ಮಾರ್ಗದಲ್ಲಿ ತೆರಳುತ್ತಿದ್ದಾಗ ಬಂಧಿಸಿದ್ದಾರೆ.