

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಮ್ಮಸಂದ್ರ ಬಳಿ ಸರ್ಜಾಪುರ ಪೊಲೀಸರು ಗುಂಡು ಹಾರಿಸಿ ರೌಡಿಶೀಟರ್‌ನನ್ನು ವಶಕ್ಕೆ ಪಡೆದಿದ್ದಾರೆ.
ಕೊಲೆ ಪ್ರಕರಣದಲ್ಲಿ ಆರೋಪಿ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನ (32) ಬಂಧಿತ. ಖಚಿತ ಮಾಹಿತಿ ಮೇರೆಗೆ ಬಂಧಿಸಲು ಮುಂದಾದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದಾರೆ.
ಕೊಲೆ ಪ್ರಕರಣ ಆರೋಪಿ: ಜ.28 ರಂದು ದೊಮ್ಮಸಂದ್ರ ಸಂತೆ ಬೀದಿ ಬಳಿ ಮಾಜಿ ರೌಡಿಶೀಟರ್ ವೆಂಕಟೇಶ್ ಎಂಬುವನ ಕೊಲೆಯಾಗಿತ್ತು. ಕಾರು ಮತ್ತು ಎರಡು ಬೈಕ್‌ಗಳಲ್ಲಿ ಬಂದಿದ್ದ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಸರ್ಜಾಪುರ ಪೊಲೀಸರಿಗೆ ಆರೋಪಿ ಶ್ರೀನಿವಾಸ್‌ದೊಮ್ಮಸಂದ್ರ ನಿರ್ಜನ ಪ್ರದೇಶದಲ್ಲಿ ಅವಿತಿರುವ ಬಗ್ಗೆ ಖಚಿತ ಮಾಹಿತಿ ಸಿಕಿತ್ತು. ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಇನ್ಸ್‌ಪೆಕ್ಟರ್ ಪಿ.ಜಿ ನವೀನ್‌ಕುಮಾರ್ ಹಾಗೂ ಕಾನ್ಸ್‌ಟೇಬಲ್ ಇರ್ಫಾನ್ ಕಲಾರಿ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದ. ಇನ್‌ಸ್ೆಕ್ಟರ್ ನವೀನ್‌ಕುಮಾರ್ ಎಚ್ಚರಿಕೆ ನೀಡಿ ಶರಣಾಗುವಂತೆ ಸೂಚಿಸಿದರು ಹಲ್ಲೆಗೆ ಮುಂದಾಗಿದ್ದರಿಂದ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಗಾಯಾಳುವನ್ನು ನಾರಾಯಣ ಹೆಲ್ತ್ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್‌ಪಿ ಸಿಕೆ ಬಾಬಾ ಮತ್ತು ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
2 ಕೊಲೆ ಪ್ರಕರಣಗಳಿವೆ: ವೆಂಕಟೇಶ್ ಕೊಲೆ ಪ್ರಕರಣದ ಸಂಬಂಧ ತನಿಖೆ ನಡೆಸಲಾಗುತ್ತಿದ್ದು ಇದೊಂದು ಸುಾರಿ ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಆರೋಪಿ ಶ್ರೀನಿವಾಸ್ ವಿರುದ್ಧ ವಿಜಯನಗರ ಠಾಣೆಯಲ್ಲಿ ಎರಡು ಕೊಲೆ ಪ್ರಕರಣ ಹಾಗೂ ಶಸಾಸ್ತ ಕಾಯ್ದೆಯಡಿ ಪ್ರಕರಣವಿದೆ, ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದರೂ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಜಿಲ್ಲಾ ಎಸ್‌ಪಿ ಸಿಕೆ ಬಾಬಾ ತಿಳಿಸಿದ್ದಾರೆ.
ಬಾಲ್ಯ ಸ್ನೇಹಿತರು: ಆರೋಪಿ ಗುಬ್ಬಚ್ಚಿ ಸೀನ ಮತ್ತು ಸುಫಾರಿ ನೀಡಿದ್ದಾನೆ ಎಂದು ಶಂಕಿಸಲಾಗುತ್ತಿರುವ ಕಾರ್ತಿಕ್ ಮೃತ ವೆಂಕಟೇಶ್‌ನ ಬಾಲ್ಯ ಸ್ನೇಹಿತರಾಗಿದ್ದು. 2013 ಕೊಲೆ ಪ್ರಕರರಣದಲ್ಲಿ ವೆಂಕಟೇಶ್ ಮತ್ತು ಕಾರ್ತಿಕ್ ಆರೋಪಿಗಳಾಗಿದ್ದು ಕಾರ್ತಿಕ್ ತನ್ನ ಕಾರಿನಲ್ಲಿಯೇ ವೆಂಕಟೇಶ್‌ನನ್ನು ಕೋರ್ಟ್‌ಗೆ ಕರೆದೊಯ್ಯುತ್ತಿದ್ದ ಎನ್ನಲಾಗಿದೆ. ಏತನ್ಮಧ್ಯೆ ಇಬ್ಬರ ನಡುವೆ ವೈಷಮ್ಯ ಮೂಡಿತ್ತು. ಬಳಿಕ ಕಾರ್ತಿಕ್ ರಾಜಿ ಮಾಡಿಕೊಂಡಿದ್ಧ. ಆದರೂ ವೆಂಕಟೇಶ್‌ಗೆ ಪ್ರಾಣ ಬೆದರಿಕೆ ಇತ್ತು. ಮಗಳ ಶಾಲೆ ಮುಗಿದ ಬಳಿಕ ಬೇರೆಡೆ ವಾಸ ಬದಲಾಯಿಸುವ ಯೋಚನೆ ಮಾಡಿಕೊಂಡಿದ್ದೇವು ಎಂದು ವೆಂಕಟೇಶ್ ಪತ್ನಿ ತಿಳಿಸಿದ್ದಾರೆ.