

ಕಲಬುರಗಿ: ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸಮಾಜದ, ಸರ‍್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ರೌಡಿ ಶೀಟರ್ಗಳ ಪರೇಡ್ ನಡೆಸಿದ ನಗರದ ವಿವಿಧ ಪೊಲೀಸ್ ಠಾಣೆಗಳ ಪೊಲೀಸರು, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.
ನಗರದ ೧೦ ಪೊಲೀಸ್ ಠಾಣೆಯಲ್ಲಿ ೨೧೬ ರೌಡಿಗಳನ್ನು ಕರೆಸಿ, ಶಾಂತಿ ಮಂತ್ರ ಬೋಧಿಸಿದರು. ಪದೇ ಪದೆ ದುಷತ್ಯಗಳಲ್ಲಿ ಭಾಗವಹಿಸಿದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಗುಂಡಾ ಕಾಯ್ದೆಯನ್ನು ಹಾಕಿ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ನರ‍್ದೇಶನದಂತೆ ಕಾನೂನು ಸುವ್ಯವಸ್ಥೆಯ ೧೦ ಠಾಣೆಗಳಲ್ಲಿ ಶಾಂತಿಗೆ ಭಂಗ ಆಗುವ ಪ್ರಕರಣಗಳಲ್ಲಿ ಭಾಗಿಯಾಗಬಾರದು. ಸನ್ನಡತೆಯಿಂದ ಜೀವನ ನಡೆಸಲು ಖಡಕ್ ಸೂಚನೆ ನೀಡಿದರು.
ಸಬ್ ರ‍್ಬನ್ ಠಾಣೆಯಲ್ಲಿ ಸಂತೋಷ ತಟ್ಟೆಪಲ್ಲಿ, ಅಶೋಕ ನಗರ ಠಾಣೆಯಲ್ಲಿ ಅರುಣಕುಮಾರ, ಬ್ರಹ್ಮಪುರ ಠಾಣೆಯಲ್ಲಿ ಸೋಮಶೇಖರ ಕಿರದಳ್ಳಿ, ಚೌಕ್ ಠಾಣೆಯಲ್ಲಿ ರಾವೇಂದ್ರ ಭಜಂತ್ರಿ, ಸ್ಟೇಷನ್ ಬಜಾರ್ನಲ್ಲಿ ಶಕೀಲ್ ಅಂಗಡಿ, ರಾವೇಂದ್ರ ನಗರ ಠಾಣೆಯಲ್ಲಿ ಕುಬೇರ ರಾಯಮಾನೆ ಸೇರಿ ವಿವಿಧ ಠಾಣೆಗಳಲ್ಲಿ ರೌಡಿ ಪರೇಡ್ ನಡೆಸಲಾಯಿತು. ಎಸಿಪಿಗಳಾದ ಭೂತೇಗೌಡ, ರಾಜಣ್ಣ ಸೇರಿ ಹಿರಿಯ ಅಧಿಕಾರಿಗಳು ಪರೇಡ್ನಲ್ಲಿ ಭಾಗವಹಿಸಿ, ರೌಡಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಠಾಣೆ ರೌಡಿಗಳು
ಸಬ್ ರ‍್ಬನ್ ೨೮
ಅಶೋಕ ನಗರ ೩೦
ಬ್ರಹ್ಮಪುರ ೨೭
ಚೌಕ್ ೧೪
ಆರ್ಜಿ ನಗರ ೨೬
ಸ್ಟೇಷನ್ ಬಜಾರ್ ೧೩
ವಿಶ್ವವಿದ್ಯಾಲಯ ೧೮
ರೋಜಾ ೧೮
ಎಂಬಿ ನಗರ ೨೦
ರಹತಾಬಾದ್ ೨೨