ರೌಡಿ ಶೀಟರ್​ ಗಡಿಪಾರು

Crime_20250604000849554.jpg
Published on

ಕಲಬುರಗಿ: ಅಶೋಕ ನಗರ ಠಾಣೆ ವ್ಯಾಪ್ತಿಯ ರೌಡಿಶೀಟರ್​, ವಿದ್ಯಾನಗರದ ಚೇತನ ಹೈಬತ್ತಿಯನ್ನು ತುಮಕೂರ ನಗರ ಟೌನ್​ ಪೊಲೀಸ್​ ಠಾಣೆಗೆ ಗಡಿಪಾರು ಮಾಡಿ ನಗರ ಪೊಲೀಸ್​ ಆಯುಕ್ತ, ಅಪರ ಜಿಲ್ಲಾ ದಂಡಾಧಿಕಾರಿ ಡಾ.ಶರಣಪ್ಪ ಎಸ್​.ಡಿ. ಆದೇಶಿಸಿದ್ದಾರೆ. ರೌಡಿಶೀಟರ್​ ವಿರುದ್ಧ ಅಶೋಕ ನಗರ ಠಾಣೆಯಲ್ಲಿ ಮೂರು, ಸ್ಟೇಷನ್​ ಬಜಾರ್​ ಠಾಣೆಯಲ್ಲಿ ಎರಡು, ಸಬ್​ ರ‍್ಬನ್​, ರಾವೇಂದ್ರ ಠಾಣೆಯಲ್ಲಿ ತಲಾ ಒಂದು, ವಡಗೇರಾ ಠಾಣೆಯಲ್ಲಿ ಒಂದು ಸೇರಿ ಒಟ್ಟು ಎಂಟು ಪ್ರಕರಣ ದಾಖಲಾಗಿದ್ದವು. ೨೦೧೬ರಿಂದ ೨೦೨೫ರವರೆಗೆ ೧೪ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು, ಕಾನೂನು ಸುವ್ಯವಸ್ಥೆಗೆ ಭಂಗ ಬರದಂತೆ ತಡೆಯಲು ಗಡಿಪಾರು ಅನಿವರ‍್ಯವೆಂದು ಅಶೋಕ ನಗರ ಪಿಐ ಅರುಣಕುಮಾರ ವರದಿ ಅನ್ವಯ ಗಡಿಪಾರು ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net