ರೋಲ್ಡ್ ಗೋಲ್ಡ್ ಚೈನ್ ಸುಲಿಗೆ ಮಾಡಿಕೊಂಡು ಪರಾರಿ

Chain snatching Photo
Published on

ಹಾಸನ:  ನಗರದ ಸಿಕೆಎಸ್ ಕಾಲೇಜು ಮುಂಭಾಗ ರಾತ್ರಿ ವೇಳೆ ನಡೆದುಕೊಂಡು ಹೋಗುವಾಗ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚಾಕು ತೋರಿಸಿ ಕುತ್ತಿಗೆಯಲ್ಲಿದ್ದ ಸರವನ್ನು ಕಸಿದು ಪರಾರಿಯಾಗಿದ್ದಾರೆ.

ತೆಲುಗರ ಬೀದಿ, ಕಸ್ತೂರಿಬಾ ರಸ್ತೆಯ ನಿವಾಸಿ ಲಿಖಿತ್ ಅವರು ಅ.17ರಂದು ರಾತ್ರಿ 11.45ರ ಸಮಯದಲ್ಲಿ ಸ್ನೇಹಿತ ರಂಗನಾಥ ಜತೆಗೆ ನಗರದ ಸಿ.ಕೆ.ಎಸ್ ಕಾಲೇಜು ಮುಂಭಾಗ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕಿನಲ್ಲಿ ಬಂದು ಅಡ್ಡಗಟ್ಟಿ, ಕುತ್ತಿಗೆಯಲ್ಲಿರುವ ಚೈನ್ ಕೊಡು ಎಂದು ಕೇಳಿದ್ದಾರೆ. ಕೊಡುವುದಿಲ್ಲ ಎಂದಾಗ ಚಾಕುವನ್ನು ತೋರಿಸಿ, ಹೆದರಿಸಿ, ಇನ್ನೊಬ್ಬ ಕೈಯಿಂದ ಹೊಟ್ಟೆಗೆ ಗುದ್ದಿ ಕುತ್ತಿಗೆಯಲ್ಲಿ 500 ರೂ. ಬೆಲೆ ಬಾಳುವ ರೋಲ್ಡ್‌ಗೋಲ್ಡ್ ಸರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಹೆದರಿಸಿ, ಸರ ಸುಲಿಗೆ ಮಾಡಿರುವವರನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ಲಿಖಿತ್ ಅವರು ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net