ರೋಡ್ ಕಲ್ಲೂರಿನ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

IMG-20230917-WA0008
Published on

ಚಿಂಚೋಳಿ: ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಸಂಸ್ಕೃತಿ ಬಿತ್ತಬೇಕು. ಶ್ರೀ ಕೃಷ್ಣ ಪರಮಾತ್ಮನ ಸೇಹ್ನ, ಪ್ರೀತಿ, ವಾತ್ಸಲ್ಯ, ಪರೋಪಕಾರ ಗುಣಗಳನ್ನು ಮಕ್ಕಳಿಗೆ ನಿತ್ಯವು ಬೋಧಿಸುವ ಮೂಲಕ ಭವ್ಯ ಭಾರತದ ಪರಂಪರೆಯನ್ನು ಮೈಗೂಡಿಸಿಕೊಂಡು ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸದೃಡಗೊಳಿಸಬೇಕು ಎಂದು ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಉಷಾ ಓಂಕಾರ ಹೇಳಿದರು.

ತಾಲೂಕಿನ ರೋಡ ಕಲ್ಲೂರ ಗ್ರಾಮದಲ್ಲಿರುವ ಸ್ವಾಮಿ ವಿವೇಕಾನಂದ ಪ್ರಾಥಮಿಕ, ಜೆ.ವಿ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರದಂದು ಆಯೋಜಿಸಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳು ಶ್ರೀಕೃಷ್ಣ ಹಾಗೂ ಕುಚೇಲ ನಂತಹ ಸೇಹ್ನ ಜೀವಿಗಳಾಗಿ ಬದುಕಿ ಬಾಳಬೇಕು. ಸನ್ಮಾರ್ಗದ ದಾರಿಯಲ್ಲಿ ನಡೆದು ಪೋಷಕರಿಗೆ, ಶಾಲೆಗೆ ಕಿರ್ತಿ ತರಬೇಕು. ಮೋಬೈಲ್ ಗೀಳು ಬಿಡಿ ಶಿಕ್ಷಣಕ್ಕೆ ಮಹತ್ವ ನೀಡಿ ಎಂದು ಮಾತನಾಡಿದರು.

ಇದಕ್ಕೂ ಮುಂಚೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ಯ ಕಾರ್ಯಕ್ರಮಕ್ಕೆ ಆಗಮಿಸಿದ ಪೋಷಕರಿಗೆ ಸಂವಿಧಾನ ಪೀಠಿಕೆ ವಾಚಿಸುವ ಮೂಲಕ ಪ್ರಜಾಪ್ರಭುತ್ವ ದಿನಾ ಆಚರಿಸಿದರು.

ನಂತರ ಸಂಸ್ಥೆಯ ಸ್ಥಾಪಕ ದಿ. ವೀರಣ್ಣ ಭೋವಿ ಅವರ ಅಗಲಿಕೆಯ ಹಿನ್ನೆಲೆ ಒಂದು ನಿಮಿಷ ಮೌನಾಚರಣೆ ನಡೆಸಿದರು.

ಮಕ್ಕಳು ಶ್ರೀ ಕೃಷ್ಣ, ರಾಧೆ ವೇಷಭೂಷಣದೊಂದಿಗೆ ಆಗಮಿಸಿ ಅದ್ಧೂರಿಯಾಗಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದರು.

ಈ ವೇಳೆ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಭೋವಿ, ಲಕ್ಷ್ಮಿ ಭೋವಿ, ಸಂಗಾರೆಡ್ಡಿ, ಆನಂದ ಜಿ.ಮೇತ್ರಿ, ರಮೇಶ್, ಶಿವಕುಮಾರ, ದಿವ್ಯಾರಾಣಿ, ವೀಣಾ, ಕವಿತಾ, ಗೀತಾ, ಸೋಮಶೇಖರ್, ಅರ್ಚನಾ, ಶಿವಲೀಲಾ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net