

ಅಥಣಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪಟ್ಟಣದ ಹೊರವಲಯದ ಜ್ಯೋತಿಬಾ ದೇವಸ್ಥಾನದ ಆವರಣದಲ್ಲಿ ರೋಟರಿ ಉದ್ಯಾನ ನಿರ್ಮಾಣ ಮಾಡಲು ಕ್ಲಬ್ ಮುಂದಾಗಿದೆ ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.
ಪಟ್ಟಣದ ಜ್ಯೋತಿಬಾ ದೇವಸ್ಥಾನದ ಗುಡ್ಡದಲ್ಲಿ ಈಚೆಗೆ ಗುರುಪೂರ್ಣಿಮೆ ನಿಮಿತ್ತ ರೋಟರಿ ಉದ್ಯಾನ ನಾಮಕರಣ ಹಾಗೂ ವನಮಹೋತ್ಸವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಉದ್ಯಾನದಲ್ಲಿ ೩೫೦ ವಿವಿಧ ತರಹದ ಸಸಿ ನೆಡುವ ಸಂಕಲ್ಪ ಹೊಂದಿದ್ದೇವೆ ಎಂದರು.
ಸಾಮಾಜಿಕ ಅರಣ್ಯ ವಲಯಾಧಿಕಾರಿ ಪ್ರಶಾಂತ ಗೌರಾಣಿ ಮಾತನಾಡಿದರು.
ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ರೋಟರಿ ಸಂಸ್ಥೆ ಮತ್ತು ಅರಣ್ಯ ಇಲಾಖೆಯು ಪರಿಸರ ಸಂರಕ್ಷಣೆ ಮಾಡುತ್ತಿರುವುದು ಎಲ್ಲ ಸಂಘ-ಸಂಸ್ಥೆಗಳಿಗೆ ಮಾದರಿ ಎಂದರು.
ಕ್ಲಬ್ ಅಧ್ಯಕ್ಷ ಸಚಿನ ದೇಸಾಯಿ, ಇನ್ನರ್‌ವ್ಹೀಲ್ ಅಧ್ಯಕ್ಷೆ ಪೂರ್ಣಿಮಾ ಪಾಂಗಿ, ಎಂ.ಎಂ.ಮುಂಜಿ, ಬಸವರಾಜ ಮಾದಗುಡಿ, ಸುನೀಲ ದೇಸಾಯಿ, ಗುರುಲಿಂಗ ಬಾಸಿಂಗಿ, ಬಾಬು ಚಮಕೇರಿ, ಗಿರೀಶ ದಿವಾನಮಳ, ರೋಟರಿ ಸದಸ್ಯರಾದ ಮೇಘರಾಜ ಪರಮಾರ, ಅರುಣ ಸೌದಾಗರ, ಶೇಖರ ಕೊಲಾರ, ಡಾ.ಪಿ.ಪಿ.ಮಿರಜ, ಅರುಣ ಯಲಗುದ್ರಿ, ಡಾ.ಆನಂದ ಗುಂಜಿಗಾವಿ, ಆನಂದ ಟೊನಪಿ ಇತರರಿದ್ದರು.