ರೋಟರಿ ಸಮಾಜಮುಖಿ ಸೇವಾ ಕಾರ್ಯ ಅನನ್ಯ

IMG-20250105-WA0010
Published on

ಚಾಮರಾಜನಗರ: ರೋಟರಿ ಸಂಸ್ಥೆಯು ಮಾನವೀಯತೆಯ ಆಧಾರದ ಮೇಲೆ ಅನೇಕ ಸಮಾಜಮುಖಿ ಸೇವೆ ಮಾಡುತ್ತಿದ್ದು. ಜಗತ್ತಿನಲ್ಲಿ ಪೋಲಿಯೋ, ಅಂಧತ್ವ ನಿರ್ಮೂಲನೆಗಾಗಿ ಶ್ರಮಿಸುತ್ತಿದೆ. ಈ ರೋಟರಿ ಸಂಸ್ಥೆಯ ಕಾರ್ಯ ಸೇವಾ ಕಾರ್ಯ ಅನನ್ಯವಾಗಿದೆ ಎಂದು  ಎಂಎಸ್ ಐ ಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ರೋಟರಿ ಭವನದ ಮುಂಭಾಗದಲ್ಲಿ ಗ್ರೀನ್ ಸಂಸ್ಥೆ, ರೋಟರಿ ಸಂಸ್ಥೆ ಇವರ ಸಹಯೋಗದಲ್ಲಿ  ಶ್ರೀಭಗವಾನ್ ಮಹಾವೀರ ವಿಕಲಾಂಗ ಸಹಾಯ ಸಮಿತಿ ಜೈಪುರ, ಬೆಂಗಳೂರಿನ ರೋಟರಿ ಸಂಸ್ಥೆಯು ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಕೃತಕ ಕಾಲು ಮತ್ತು ಮುಂಗೈ ಬೃಹತ್ ಜೋಡಣಾ ಶಿಬಿರಕ್ಕೆ ತೆರಳುತ್ತಿರುವ ಜಿಲ್ಲೆಯ ಫಲಾನುಭವಿಗಳ ವಾಹನಕ್ಕೆ ನಗರದ ರೋಟರಿ ಭವನದ ಮುಂಭಾಗ  ಚಾಲನೆ ನೀಡಿ ಮಾತನಾಡಿದರು. ರೋಟರಿ ಸಂಸ್ಥೆಯು ಧರ್ಮ ಕಾರ್ಯಗಳನ್ನು ಮಾಡುತ್ತಿದೆ.ಅಂಧತ್ವ, ಪೋಲಿಯೋ ನಿರ್ಮೂಲನೆ ಗಾಗಿ ಶ್ರಮಿಸುತ್ತಿದೆ. ಕಣ್ಣಿನ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಉಚಿತ ಡಯಾಲಿಸಿಸ್, ಆರೋಗ್ಯ, ಶಿಕ್ಷಣ , ಪರಿಸರ ಸಂರಕ್ಷಣೆ  ಸೇರಿದಂತೆ ಇನ್ನಿತರ ಸಮಾಜಮುಖಿ ಯಲ್ಲಿ ರೋಟರಿ ಸಂಸ್ಥೆಯು ಕೆಲಸ ಮಾಡುತ್ತಿದೆ ಎಂದರು.

ಶ್ರೀಭಗವಾನ್ ಮಹಾವೀರ ವಿಕಲಾಂಗ ಸಹಾಯ ಸಮಿತಿ ಜೈಪುರ, ಬೆಂಗಳೂರಿನ ರೋಟರಿ ಸಂಸ್ಥೆಯು ಬೆಂಗಳೂರಿನಲ್ಲಿ ಕೃತಕ ಕಾಲು ಮತ್ತು ಮುಂಗೈ ಬೃಹತ್ ಜೋಡಣಾ ಶಿಬಿರವನ್ನು ಆಯೋಜಿಸಿರುವ  ಶಿಬಿರಕ್ಕೆ ಕೃತಕ ಕಾಲು ಮತ್ತು ಮುಂಗೈ ಅಗತ್ಯವಿರುವ ಜಿಲ್ಲೆಯ ವಿಶೇಷಚೇತನ ಫಲಾನುಭವಿಗಳನ್ನು ಕರೆದೊಯ್ಯಲಾಗುತ್ತಿದೆ.  ಶಿಬಿರ ಕ್ಕೆ ತೆರಳುವ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಕೋರಿದರು.

ರೋಟರಿ ಅಧ್ಯಕ್ಷ ರಾಮಸಮುದ್ರ ನಾಗರಾಜು ಮಾತನಾಡಿ, ಬೆಂಗಳೂರಿನಲ್ಲಿ  ಶ್ರೀಭಗವಾನ್ ಮಹಾವೀರ ವಿಕಲಾಂಗ ಸಹಾಯ ಸಮಿತಿ ಜೈಪುರ, ಬೆಂಗಳೂರಿನ ರೋಟರಿ ಸಂಸ್ಥೆಯು ಬೆಂಗಳೂರಿನಲ್ಲಿ ಕೃತಕ ಕಾಲು ಮತ್ತು ಮುಂಗೈ ಬೃಹತ್ ಜೋಡಣಾ ಶಿಬಿರವನ್ನು ಆಯೋಜಿಸಿರುವ  ಶಿಬಿರಕ್ಕೆ ಜಿಲ್ಲೆಯಿಂದ 55 ತೆರಳಿದರು. ಅವರಿಗೆ ಊಟ, ವಸತಿ ಹಾಗೂ ಉಚಿತ ಕೃತಕ ಕಾಲು, ಮುಂಗೈ ಎಲ್ಲಾ ಸೌಲಭ್ಯಗಳನ್ನು ರೋಟರಿ ನೀಡಲಿದೆ ಎಂದರು.

ಈ ಸಂದರ್ಭದಲ್ಲಿ  ಕಾರ್ಯದರ್ಶಿ ಹೆಚ್.ಎಂ. ಗುರುಸ್ವಾಮಿ,  ಮುಂದಿನ ಸಾಲಿನ ಅಧ್ಯಕ್ಷ ಕಾಗಲವಾಡಿ ಚಂದ್ರು, ಕಾರ್ಯದರ್ಶಿ ಕೆಂಪನಪುರ ಸಿದ್ದರಾಜು, ಕೆ.ಎಂ.ಮಹದೇವಸ್ವಾಮಿ, ಎಸ್.ಅರ್. ಎಸ್ ಶ್ರೀನಿವಾಸ್,  ರತ್ಮಮ್ಮ, ಹೊಸೂರು ಜಗದೀಶ್, ಉಪಾಧ್ಯಕ್ಷ ಅಬ್ದುಲ್ ಅಜೀಜ್ ದೀನಾ,  ಜಿಲ್ಲಾ ಅಂಗವೀಕಲ ಕ್ಷೇಮಾಭಿವೃದ್ದಿ ಸಮಿತಿ ಅಧ್ಯಕ್ಷ ಎಂ‌.ರಮೇಶ್,  ಸಿದ್ದಯ್ಯ , ಡಿ ಡಿಆರ್ ಸಿ ನೋಡಲ್ ಅಧಿಕಾರಿ ವೆಂಕಟೇಶ್, ಹಾಗೂ ಸಿಬ್ಬಂದಿವರ್ಗ, ಗ್ರೀನ್ ಸಂಸ್ಥೆ ಕಾರ್ಯದರ್ಶಿ ಮಹದೇವಸ್ವಾಮಿ, ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net