ರೋಟರಿ ಸಂಸ್ಥೆಯಿಂದ ನಿಸ್ವಾರ್ಥ ಸೇವೆ

Selfless service from Rotary
Selfless service from Rotary
Published on

ಜಮಖಂಡಿ: ಯಾವುದೇ ಲಾಪೇಕ್ಷೆವಿಲ್ಲದೆ ಸ್ವಂತ ಹಣ ಖರ್ಚು ಮಾಡಿ ಸಾಮಾಜಿಕ ಸೇವೆ ಮಾಡುವ ಏಕೈಕ ಸಂಸ್ಥೆ ರೋಟರಿ ಎಂದು ಅಸಿಸ್ಟೆಂಟ್ ರೋಟರಿ ಗವರ್ನರ್ ಶಹರ್ಷ ಶಹಾ ತಿಳಿಸಿದರು.

ನಗರದ ಹೊರವಲಯದ ವಿಜಯಪುರ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ಆಯೋಜಿಸಿದ್ದ 65ನೇ ರೋಟರಿ ಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಮಖಂಡಿಯ ರೋಟರಿ ಸಂಸ್ಥೆ ಬಹಳ ವರ್ಷಗಳಿಂದ ಸಮಾಜ ಸೇವೆಯ ಮಾಡುತ್ತಾ ಬಂದಿದೆ. ಇನ್ನು ಅನೇಕ ಜನರು ಸಂಸ್ಥೆಯಲ್ಲಿ ಹೊಸದಾಗಿ ಸೇರ್ಪಡೆಯಾಗಿ ತಮ್ಮ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ರೋಟರಿ ಸದಸ್ಯ ಆರ್.ಪಿ. ನ್ಯಾಮಗೌಡ ಮಾತನಾಡಿ, ಜಮಖಂಡಿಯಲ್ಲಿ ರೋಟರಿ ಸಂಸ್ಥೆ 1960 ರಲ್ಲಿ ಪ್ರಾರಂಭವಾಯಿತು. ಪ್ರತಿ ವರ್ಷ ಹನ್ನೆರಡು ಕಾರ್ಯಕ್ರಮ ಹಮ್ಮಿಕೊಂಡು ಪೋಲಿಯೋ ನಿರ್ಮೂಲನೆ, ಶಿಕ್ಷಣ ಆರೋಗ್ಯ, ಸಾಮಾಜಿಕ ಸೇವೆ, ಕೌಶಲಯುಳ್ಳವರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಮಾಡಿದೆ ಎಂದರು.

ಓಲೆಮಠದ ಆನಂದ ದೇವರು ಶ್ರೀಗಳು ಮಾತನಾಡಿದರು.

ಭಾವನಾ ಬೆಳಗಲಿ ಹಾಗೂ ತ್ರಿಶಾ ಬುಜರುಕ ಪ್ರಾರ್ಥಿಸಿದರು. ಕಿರಣಕುಮಾರ ದೇಸಾಯಿ ಸ್ವಾಗತಿಸಿದರು. ಪ್ರಕಾಶ ಗೌಡರ, ಶಶಿಧರ ಕಡಿಬಾಗಿಲ ನಿರೂಪಿಸಿದರು. ಮಲ್ಲಪ್ಪ ಬುಜರುಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net