

ಶನಿವಾರಸಂತೆ: ಸಮಿಪದ ಕೊಡ್ಲಿಪೇಟೆ ಸಂಜೀವಿನಿ ಕಟ್ಟಡ ಕಾರ್ಮಿಕರ ಸಂಘದಿಂದ 77ನೇ ಸ್ವಾತಂತ್ರೃ ದಿನವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಕೆ.ಎಸ್.ನಾಗೇಶ್ ಧ್ವಜಾರೋಹಣ ನೆರವೇರಿಸಿದರು. ಸಂಘದ ಉಪಾಧ್ಯಕ್ಷ ಶೇಖರ್, ಗೌರವಾಧ್ಯಕ್ಷ ಇಬ್ರಾಹಿಂ, ಕಾರ್ಯದರ್ಶಿ ಡಿ.ಆರ್.ವೇದಕುಮಾರ್, ಪದಾಧಿಕಾರಿಗಳಾದ ಇಫ್ತಿಕರ್ ಪಾಷ, ಬಷೀರ್ ಅಹಮ್ಮದ್, ಪ್ರಮುಖರಾದ ಮಹದೇಶ್ವರ್, ಮುನ್ನ, ಗಣೇಶ್, ಜಾವಿದ್, ಭಾಸ್ಕರ್ ಆಚಾರ್ಯ, ಶೇಖರ್ ಮುಂತಾದವರಿದ್ದರು.
ಸಮೀಪದ ಆಲೂರು-ಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆ ವತಿಯಿಂದ ಸ್ವಾತಂತ್ರೃ ದಿನವನ್ನು ಆಚರಿಸಲಾಯಿತು. ರೋಟರಿ ಭವನದಲ್ಲಿ ಧ್ವಜರೋಹಣ ನೆರವೇರಿಸಿದ ಬಳಿಕ ಸಮೀಪದ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆ, ಗೋಣಿಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಎಚ್.ಆರ್.ಉದಯ್‌ಕುಮಾರ್ ಧ್ವಜಾರೋಹಣ ನೆರವೇರಿಸಿದರು. ನಂತರ ಶಾಲೆಯ ವಿದ್ಯಾರ್ಥಿಗಳಿಗೆ 40 ತಟ್ಟೆಗಳನ್ನು ರೋಟರಿ ಸಂಸ್ಥೆ ವತಿಯಿಂದ ವಿತರಿಸಲಾಯಿತು.
ರೋಟರಿ ಕಾರ್ಯದರ್ಶಿ ಸಂಪತ್, ಸದಸ್ಯರಾದ ಎಚ್.ಇ.ತಮ್ಮಯ್ಯ, ವಿಜಯ್, ಎಸ್.ಜೆ.ಪ್ರಸನ್ನಕುಮಾರ್, ಎಂ.ಇ.ವಿಠಲ್, ಲತೇಶ್, ಆನಂದ್ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಜರಿದ್ದರು.