

ಅಥಣಿ: ಸಮಾಜಮುಖಿ ಸೇವೆಗಳು ರೋಟರಿ ಸಂಸ್ಥೆಯ ಮುಖ್ಯ ಗುರಿಯಾಗಿದೆ. ೨೬ ವರ್ಷಗಳಿಂದ ಇಲ್ಲಿನ ರೋಟರಿ ಸಂಸ್ಥೆ ಜನಸೇವೆಗಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ರೋಟರಿ ಪ್ರಾಂತಪಾಲ ಶರದ ಪೈ ಹೇಳಿದರು.
ಪಟ್ಟಣದ ಹೋಟೆಲ್ ಆರ್. ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೋಟರಿ ಕ್ಲಬ್ ಸಂಸ್ಥೆಯ ೨೬ನೇ ವರ್ಷದ ರೋಟರಿ ಸಂಸ್ಥಾಪನಾ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಜನಸೇವೆ ಮಾಡುತ್ತಿರುವ ರೋಟರಿ ಸಂಸ್ಥೆಗೆ ೧೨೦ ವರ್ಷಗಳ ಇತಿಹಾಸವಿದೆ. ಅದರಂತೆ ವಿವಿಧ ದೇಶಗಳಲ್ಲಿ ೪೦ ಲಕ್ಷ ಸದಸ್ಯರು ನಿರಂತರ ಜನಸೇವೆಯಲ್ಲಿ ತೊಡಗಿದ್ದಾರೆ ಎಂದರು.
ಅಥಣಿ ರೋಟರಿ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ, ಸಹಾಯಕ ಪ್ರಾಂತಪಾಲ ಅನಂತ ನಾಡಗೌಡ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಅರುಣ ಸೌದಾಗರ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯದರ್ಶಿ ಸಚಿನ ದೇಸಾಯಿ, ಖಜಾಂಚಿ ಶೇಖರ ಕೋಲಾರ, ಅನಿಲ ದೇಶಪಾಂಡೆ, ಅರುಣ ಯಲಗುದ್ರಿ, ಭರತ ಸೋಮಯ್ಯ, ಡಾ.ಪಿ.ಪಿ,ಮಿರಜ, ಡಾ.ಆನಂದ ಗುಂಜಿಗಾವಿ, ಡಾ.ಆನಂದ ಕುಲಕರ್ಣಿ, ಪ್ರಫುಲ ಪಡನಾಡ, ಸಂತೋಷ ಬೊಮ್ಮಣವರ, ಡಿ.ಡಿ.ಮೆಕನಮರಡಿ, ಮೇಘರಾಜ ಪರಮಾರ, ಬಾಹುಬಲಿ ಅಸ್ಕಿ, ಪ್ರಶಾಂತ ಗೌರಾಣಿ, ಶಶಿಕಾಂತ ಹುಲಕುಂದ, ಸೋಮು ವಾಂಗಿ ಇತರರಿದ್ದರು.