

ಚಾಮರಾಜನಗರ: ನಗರದ ರೋಟರಿ ಸಂಸ್ಥೆಗೆ 2025-26ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಸಂಸ್ಥೆಯ 55 ನೇ ಅಧ್ಯಕ್ಷರಾಗಿ ಕಾಗಲವಾಡಿಚಂದ್ರು, ಕಾರ್ಯದರ್ಶಿ ಯಾಗಿ ಕೆಂಪನಪುರ ಸಿದ್ದರಾಜು ಅವರನ್ನು ಶುಕ್ರವಾರ ಆಯ್ಕೆಮಾಡಲಾಯಿತು.
ನಗರದ ರೋಟರಿ ಸಂಸ್ಥೆಯ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅವರೋಧವಾಗಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಮುಂದಿನ ಸಾಲಿನ ಅಧ್ಯಕ್ಷರಾಗಿ ಅಬ್ದುಲ್ ಅಜೀಜ್ ದೀನಾ, ಉಪಾಧ್ಯಕ್ಷರಾಗಿ ಎಚ್.ಎನ್.ಗುರುಸ್ವಾಮಿ, ಸಹ ಕಾರ್ಯದರ್ಶಿಯಾಗಿ ಅಂಕಶೆಟ್ಟಿ, ಖಜಾಂಚಿಯಾಗಿ ಆರ್.ಎಂ.ಸ್ವಾಮಿ, ದಂಡ ಪಾನೀಯ ರಮೇಶ್, ನಿರ್ದೇಶಕರಾಗಿ ಸಿದ್ದಮಲ್ಲಪ್ಪ, ರತ್ನಮ್ಮ, ಅಶೋಕ್, ವರ್ಗೀಸ್, ರಾಮು, ವಿವಿಧ ಛೇರ್ಮನ್‌ಗಳಾಗಿ ಜಿ.ಅರ್.ಅಶ್ವಥ್ ನಾರಾಯಣ್, ಸಿ.ವಿ.ಶ್ರೀನಿವಾಸಶೆಟ್ಟಿ, ಸುರೇಶ್, ಕಾಳನಹುಂಡಿ ಗುರುಸ್ವಾಮಿ, ನಾಗರಾಜು ಡಿ.ಪ್ರಕಾಶ್, ಕೆ.ಎಂ.ಮಹದೇವಸ್ವಾಮಿ, ಸಿ.ಎ.ರಮೇಶ್, ಪ್ರಭಾಕರ್, ನಾರಾಯಣ್, ಸುಭಾಷ್, ಕಮಲ್ ರಾಜ್, ಚಂದ್ರಪ್ರಭ ಜೈನ್, ಬಿ.ಕೆ.ಮೋಹನ್ ಅವಿರೋಧ ಅಯ್ಕೆಗೊಂಡರು. ಸಿ.ವಿ.ಶ್ರೀನಿವಾಸಶೆಟ್ಟಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ರೋಟರಿ ಸಂಸ್ಥೆಯೂ ಕಳೆದ 54 ವರ್ಷಗಳಿಂದಲ್ಲೂ ಸಮಾಜದಲ್ಲಿ ಉತ್ತಮ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮುಂದೆಯೂ ಕೂಡ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಸಂಸ್ಥೆಯ ಘನತೆಗೆ ಚ್ಯುತಿಯಾಗದ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುವುದು ಎಂದರು.