

ಬಾಗಲಕೋಟೆ: ಸರ್ಕಾರಿ ಶಾಲಾ ಮಕ್ಕಳಿಗೆ ನೋಟಬುಕ್, ಡೆಸ್ಕ್ ಹಾಗೂ ಮಹಿಳೆಯರಿಗೆ ಹೊಲಿಗೆ ತರಬೇತಿ ಸೇರಿದಂತೆ ಜನಪರ ಕೆಲಸವನ್ನು ಮಾಡಲು ಒತ್ತು ನೀಡಲಾಗುವುದು ಎಂದು ರೋಟರಿ ಕ್ಲಬ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಹದ್ಲಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸರ್ಕಾರಿ ಶಾಲೆಗಳ ಮಕ್ಕಳಿಗೆ ಅಂದಾಜು ೬೦೦ಕ್ಕೂ ಹೆಚ್ಚು ನೋಟ್‌ಬುಕ್ ವಿತರಣೆ, ಸ್ವಯಂ ಉದ್ಯೋಗ ತರಬೇತಿ, ಸರ್ಕಾರಿ ಶಾಲೆ ಗಳಿಗೆ ೧೫೦ ಬೆಂಚ್ ವಿತರಣೆ, ಉದ್ಯಾನವನ, ೧೦ ಸರ್ಕಾರಿ ಶಾಲೆಗಳಿಗೆ ಇ-ಲರ್ನಿಂಗ್ ಕಿಟ್ ವಿತರಣೆ, ಬಡ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ, ಬಸ್ ತಂಗುದಾಣ, ಹೆಣ್ಣು ಮಕ್ಕಳಿಗೆ ೨೫ ಸೈಕಲ್ ವಿತರಣೆ ಮಾಡಲಾಗುವುದು ಎಂದರು.
ದ0ತ ಆರೋಗ್ಯ ತಪಾಸಣಾ ಶಿಬಿರ, ಸರ್ಕಾರಿ ಪ್ರೌಢ ಶಾಲೆ ಗಳಿಗೆ ೨೫ ಕಂಪ್ಯೂಟರ್ ವಿತರಣೆ, ಸರ್ಕಾರಿ, ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಕಲಿಕಾ ಸಾಮರ್ಥ್ಯ ವೃತ್ತಿಗೆ ತರಬೇತಿ, ಬೇಸಿಗೆಯಲ್ಲಿ ಜಾನುವಾರಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ನೇತ್ರ ಹಾಗೂ ಅಂಗಾ0ಗ ದಾನ ಮಾಡಲು ಪ್ರೇರಣೆ ಹಾಗೂ ಜಾಗೃತಿ ಮೂಡಿಸುವುದು, ವಿಜಯಪುರ ಜಿಲ್ಲೆಯ ಕನ್ನೂರು ಗ್ರಾಮದ ಶಾಂತಿ ಕುಟೀರ ಆಶ್ರಮದಲ್ಲಿ ೬೦೦ ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ, ಕನ್ನಡಕ ವಿತರಣೆ, ಗಣಿತ, ಇಂಗ್ಲಿಷ್ ಭಾಷಾ ಕಲಿಕೆ, ಅಲ್ಲದೇ ಮಕ್ಕಳಿಗೆ ನೋಟ್‌ಬುಕ್, ಪೆನ್ನು ವಿತರಿಸಲಾಗುವುದು ಎಂದು ಹೇಳಿದರು.
ನಿಕಟಪೂರ್ವ ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ ನಾವಲಗಿ ಮಾತನಾಡಿ, ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಹದ್ಲಿ, ಕಾರ್ಯದರ್ಶಿಯಾಗಿ ಸಂತೋಷ ಪಾಟೀಲ ಹಾಗೂ ಖಜಾಂಚಿಯಾಗಿ ಪ್ರಕಾಶ ಭೂತಲ್ ಅವರು ೨೦೨೫-೨೬ ಸಾಲಿಗೆ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.
ನನ್ನ ಅಽಕಾರ ಅವಽಯಲ್ಲಿ ಸಾಮಾಜಿಕ ಕಳಕಳಿಯುಳ್ಳ ಕೆಲಸವನ್ನು ಮಾಡಿದ್ದೇನೆ. ಪಲ್ಸ ಪೊಲಿಯೋ, ರೋಟರಿ ಗಾರ್ಡನ್, ವಿವಿಧ ಶಾಲೆ ಗಳಿಗೆ ಚೇರ್, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದು ತಿಳಿಸಿದರು.
ಪದಗ್ರಹಣ ಪದಗ್ರಹಣ ಸಮಾರಂಭ ಜೂ. ೨೯ರಂದು ಸಂಜೆ ೬ ಗಂಟೆಗೆ ಸಾಯಿ ಮಂದಿರದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಡಾ. ಲೆನ್ನಿ ಡಿಕೋಸ್ಟಾ, ಸಹಾಯಕ ಗವರ್ನರ್ ನಾರಾಯಣ ಹೆರಕಲ್, ಜಿಲ್ಲಾ ಹಿಂದಿನ ಗವರ್ನರ್ ಡಾ. ಜಿ.ಆರ್. ಮಾಸೂರಕರ ಆಗಮಿಸಲಿದ್ದಾರೆ.
ಮುಖಂಡರಾದ ಶಿವಕುಮಾರ ನಂದಿಕೋಲಮಠ, ನಾರಾಯಣ ಹೆರಕಲ್, ಡಾ. ಜಿ.ಆರ್. ಮಾಸೂರಕರ, ಸಂತೋಷ ಪಾಟೀಲ, ಪ್ರಕಾಶ ಭೂತಲ್ ಇದ್ದರು.