

ವಿಜಯವಾಣಿ ಸುದ್ದಿಜಾಲ ಧಾರವಾಡ
ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜು. 19ರಂದು ಸಂಜೆ 5ಕ್ಕೆ ನಗರದ ರಂಗಾಯಣದ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನೂತನ ಅಧ್ಯಕ್ಷೆ ಡಾ. ಮಾಧುರಿ ಬಿರಾದಾರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಅಧ್ಯಕ್ಷೆಯಾಗಿ ನಾನು ಹಾಗೂ ಕಾರ್ಯದರ್ಶಿ ಡಾ.ದೃಷ್ಟಿ ದೇಶಪಾಂಡೆ ಅವರಿಗೆ ಜಿಲ್ಲಾ ಗವರ್ನರ್ ಆನಂದ ಕುಲಕರ್ಣಿ ಪ್ರಮಾಣವಚನ ಬೋಧಿಸುವರು. ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಸಹಾಯಕ ಗವರ್ನರ್ ರಾಽಕಾ ಗೋಖಲೆ, ಹಿಂದಿನ ಪದಾಧಿಕಾರಿಗಳಾದ ಗೌರಿ ಮಾದಲಭಾವಿ, ಸ್ಮಿತಾ ಮಂತ್ರಿ, ಇತರರು ಅತಿಥಿಗಳಾಗಿ ಭಾಗವಹಿಸುವರು ಎಂದರು.
ಪರಿಸರ ಸಂರಕ್ಷಣೆ, ಗಿಡ ನೆಡುವುದು, ಕೆರೆಗಳ ಪುನರುಜ್ಜೀವನದ ಜತೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕಾಗಿ ಆಪ್ತ ಸಮಾಲೋಚನೆ ಆಯೋಜನೆ, ಮಹಿಳಾ ಆರೋಗ್ಯ ಶಿಬಿರ, ಋತುಚಕ್ರ ಜಾಗೃತಿ ಮಾಹಿತಿ ನೀಡುವ ಉದ್ದೇಶ ಹೊಂದಿದೆ. ಸೈಬರ್ ಅಪರಾಧ, ನೀರು ನಿರ್ವಹಣೆಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಕಾರ್ಯಕಮ ರೂಪಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನೂತನ ಕಾರ್ಯದರ್ಶಿ ಡಾ. ದೃಷ್ಟಿ ದೇಶಪಾಂಡೆ, ನಿಕಟಪೂರ್ವ ಅಧ್ಯಕ್ಷೆ ಗೌರಿ ಮಾದಲಭಾವಿ ಇದ್ದರು.