ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ 14 ಪ್ರಶಸ್ತಿ

14 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ರೋಟರಿ ಜಿಲ್ಲಾ ಸಮ್ಮೇಳನಲ್ಲಿ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಧಾರವಾಡ ಒಟ್ಟು 14 ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ಕ್ಲಬ್ ಮಾಜಿ ಅಧ್ಯಕ್ಷೆ ಡಾ. ಪಲ್ಲವಿ ದೇಶಪಾಂಡೆ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2021-22ನೇ ಸಾಲಿನಲ್ಲಿ ಕೈಗೊಂಡ ಅನೇಕ ಪ್ರಮುಖ ಯೋಜನೆಗಳನ್ನು ಗಮನಿಸಿ ಪ್ರಶಸ್ತಿಗಳನ್ನು ನೀಡಲಾಗಿದೆ. ಒಟ್ಟು 14 ಪ್ರಶಸ್ತಿಗಳು ಒಂದೇ ವರ್ಷದಲ್ಲಿ ಬಂದಿರುವುದು ಕ್ಲಬ್‌ನ ಈವರೆಗಿನ ಅತ್ಯಧಿಕ ದಾಖಲೆಯಾಗಿದೆ ಎಂದರು.
ಎಸ್‌ಡಿಎಂ ವೈದ್ಯಕೀಯ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ‘ಅಮೃತಾ’ ಎದೆಹಾಲಿನ ಬ್ಯಾಂಕ್, ನಗರದ ಪ್ರಧಾನ ಪ್ರದೇಶಗಳಲ್ಲಿ ಬಸ್ ಶೆಲ್ಟರ್ ನಿರ್ಮಾಣ, ಮೆಗಾ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮ, ಸಮುದಾಯ ಸೇವಾ ಯೋಜನೆ, ವಿವಿಧ ಶಾಲೆಗಳಲ್ಲಿ ಶೌಚಗೃಹಗಳ ನಿರ್ಮಾಣ, ಕೃತಕ ಯಾಂತ್ರಿಕ ಕೈ ಜೋಡಣೆ ಸೇರಿ ವಿವಿಧ ಮಹತ್ವದ ಕಾರ್ಯಕ್ರಗಳಿಗೆ ಈ ಪ್ರಶಸ್ತಿಗಳು ಸಂದಿವೆ ಎಂದರು.
ಸಮಾಜದ ಒಳಿತಿಗಾಗಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ಈ ಪ್ರಶಸ್ತಿಗಳು ಪ್ರೇರಣೆ ನೀಡಿದಂತಾಗಿದೆ. ಸದ್ಯ ಅಧಿಕಾರ ವಹಿಸಿಕೊಂಡ ಪದಾಧಿಕಾರಿಗಳು ಸಹ ಅತ್ಯುತ್ತಮ ಯೋಜನೆಗಳನ್ನು ರೂಪಿಸಿದ್ದಾರೆ. ಅವರೂ ಉತ್ತಮ ಸಾಧನೆ ಮಾಡಬಲ್ಲರು ಎಂಬ ವಿಶ್ವಾಸ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net