ರೋಜ್ಗಾರ್ ದಿನಾಚರಣೆ: ಕೂಲಿ ಕೆಲಸ ಕೊಡುವಂತೆ 355 ಜನರಿಂದ ಅರ್ಜಿ

IMG-20230822-WA0007
Published on

ಚಿಂಚೋಳಿ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ನರೇಗಾ ಯೋಜನೆಯಡಿ ವಿವಿಧ ರೀತಿಯ ಕಾಮಗಾರಿಗೆ ಅವಕಾಶಗಳಿದ್ದು, ಯಾರು ಗೂಳೆ ಹೊಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾ.ಪಂ ಪಿಡಿಓ ಶ್ರೀಪತರಾವ ಹೇಳಿದರು.

ತಾಲೂಕಿನ ಕೇರಳ್ಳಿ ಗ್ರಾಮದ ಗ್ರಾ.ಪಂ ಆವರಣದಲ್ಲಿ ಜಿ.ಪಂ,ತಾಪಂ, ಗ್ರಾಮ ಪಂಚಾಯಿತಿ ವತಿಯಿಂದ ರೋಜಗಾರ ದಿನಾಚರಣೆ ಅಂಗವಾಗಿ ಮಾತನಾಡಿದರು.

ಇದಕ್ಕೂ ಮುಂಚೆ ಕೂಲಿಕಾರರು ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟದ ಸುಮಾರು 335 ಜನರು ಕೂಲಿ ಕೆಲಸ ನೀಡುವಂತೆ ನಮೂನೆ 6ನ್ನು ಪಿಡಿಓ ಶ್ರೀಪತರಾವ ಅವರಿಗೆ ಅರ್ಜಿ ಸಲ್ಲಿಸಿದರು.

ಈ ವೇಳೆ ನರೇಗಾ ತಾಲೂಕು ಸಂಯೋಜಕ ಭೀಮಾಶಂಕರ, ರಾಜು ಸೇರಿದಂತೆ ಅನೇಕ ಕೂಲಿ ಕಾರ್ಮಿಕರು ಹಾಗೂ ಮಹಿಳೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net