ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ

7 HBD 2
ಚಿಟಗುಪ್ಪ ತಾಲೂಕಿನ ಮನ್ನಾಎಖ್ಖೇಳ್ಳಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಮಾಜಿ ಶಾಸಕ ಅಶೋಕ ಖೇಣಿ ಭೇಟಿ ನೀಡಿ ನಾಯಿ ಕಡಿತಕ್ಕೆ ಒಳಗಾದವರಿಗೆ ಆರೋಗ್ಯ ವಿಚಾರಿಸಿ ಮಾಹಿತಿ ಪಡೆಯುತ್ತಿರುವುದು. ಡಾ.ರಾಜಶೇಖರ ಪಾಟೀಲï, ಡಾ. ಶಿವಶಂಕರ ಬೊಮ್ಮ ಇತರರಿದ್ದರು.
Published on

ಚಿಟಗುಪ್ಪ: ಮನ್ನಾಎಖ್ಖೇಳ್ಳಿ ಸೇರಿ ಸುತ್ತಲಿನ ಜನರು ಸರ್ಕಾರಿ ಸಮುದಾಯ ಆಸ್ಪತ್ರೆಗೆ ಬಂದಾಗ ಸ್ಪಂದಿಸಿ ಸೂಕ್ತ ಚಿಕಿತ್ಸೆ ನೀಡಬೇಕೆÀಂದು ವೈದ್ಯರಿಗೆ ಮಾಜಿ ಶಾಸಕ ಅಶೋಕ ಖೇಣಿ ತಾಕೀತು ಮಾಡಿದರು.

ಮನ್ನಾಎಖೇಳ್ಳಿ ಸÀರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಭೇಟಿ ಆಸ್ಪತ್ರೆಯಲ್ಲಿನ ವ್ಯವಸ್ಥೆ ವೀಕ್ಷಿಸಿ ಅವರು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರಾಷ್ಟೀಯ ಹೆz್ದÁರಿಯಲ್ಲಿರುವ ಆಸ್ಪತ್ರೆ ಸುತ್ತಮುತ್ತಲಿನ ಸುಮಾರು ೨೦ ಗ್ರಾಮಗಳ ಜನರಿಗೆ ದೊಡ್ಡ ಆಸ್ಪತ್ರೆಯಾಗಿದ್ದು, ಈ ಆಸ್ಪತ್ರೆಯನ್ನೇ ಅವಲಂಭಿಸಿz್ದÁರೆ. ಆದರೆ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿ ಇಲ್ಲಿಗೆ ಬಂದವರಿಗೆ ರೇಬಿಸ್ ಇಂಜೆP್ಷÀನ್ ಕೊಡಬೇಕಲ್ಲ ಅಂತಾ ಪ್ರಶ್ನಿಸಿದರು. ಆಸ್ಪತ್ರೆಯಲ್ಲಿ ರೇಬಿಸ್ ಇಂಜೆP್ಷÀನ್ ಸ್ಟಾಕ್ ಇ¯್ಲÁ ಅಂದ್ರೆ ವೈದ್ಯರು ಏನು ಮಾಡುತ್ತಿದ್ದಾರೆ. ಎಮರ್ಜೆನ್ಸಿ ಅಡಿಯಲ್ಲಿ ಇಂಜೆP್ಷÀನ್ ಖರೀದಿಸಬೇಕಲ್ಲ. ಆಸ್ಪತ್ರೆಯಲ್ಲಿ ಬೇಕಾಗುವ ಸೌಲಭ್ಯಗಳ ಬಗ್ಗೆ ನನಗೆ ಮಾಹಿತಿ ನೀಡಿದಲ್ಲಿ ಸಂಬAಧಿಸಿದ ಸಚಿವರ ಗಮನಕ್ಕೆ ತಂದು ಬಗೆಹರಿಸಲಾಗುವುದು ಎಂದು ತಿಳಿಸಿದರು.

ಗ್ರಾಮದಲ್ಲಿ ಒಂಬತ್ತು ಜನರಿಗೆ ಹುಚ್ಚು ನಾಯಿ ಕಡಿದು ಆಸ್ಪತ್ರೆಗೆ ಬಂದಾಗ ಅವರನ್ನು ಬೀದರ್ ಆಸ್ಪತ್ರೆಗೆ ರವಾನಿಸಿರುವ ಬಗ್ಗೆ ತಿಳಿದು ಜಿ¯್ಲÁಡಳಿತಕ್ಕೆ ಮಾಹಿತಿ ನೀಡಿ ಗಾಯಗೊಂಡವರಿಗೆ ಬ್ರಿಮ್ಸ್ನಲ್ಲಿ ರೇಬಿಸ್ ಇಂಜೆP್ಷÀನ್ ವ್ಯವಸ್ಥೆ ಮಾಡಿ ಸೂಕ್ತ ಚಿಕಿತ್ಸೆ ಕೊಡಲು ತಿಳಿಸಲಾಗಿದೆ ಎಂದರು.

ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರು ಇಲ್ಲದಿರುವ ಬಗ್ಗೆ ಜನರು ಗಮನಕ್ಕೆ ತಂದಾಗ ತಾಲೂಕು ಆಸ್ಪತ್ರೆ ವೈದ್ಯರು ಮನ್ನಾಎಖೆಳ್ಳಿ ಸಮುದಾಯ ಆಸ್ಪತ್ರೆಗೆ ವಾರದಲ್ಲಿ ಮೂರು ದಿನ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ತಿಳಿಸಿದರು.

ಪ್ರಭಾರಿ ಡಿಎಚ್‌ಒ ಡಾ.ರಾಜಶೇಖರ ಪಾಟೀಲï, ಜಿ¯್ಲÁ ಸರ್ವP್ಷÀಣ ಅಧಿಕಾರಿ ಡಾ. ಶಿವಶಂಕರ ಬೊಮ್ಮ, ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯP್ಷÀ ಚಂದ್ರಶೇಖರ ಚನ್ನಶೆಟ್ಟಿ, ಕರಿಮಸಾಬï ಕಮಠಾಣಾ, ಪ್ರಮುಖರಾದ ನೂರೋದ್ದಿನ್, ಸಲಾಮï ಪಾಶಾ, ಶಿವಪುತ್ರ ಸಾದಾ, ಸಂತೋಷ ಕಮಲಪುರ, ಗಂಗಾ ಬಾಬು, ಶಿರೋಮಣಿ, ರಾಜಕುಮಾರ ತರಿ, ಶಮಿ ಖುದುಸ್ ಆಸ್ಕರ್, ಆಶೀಫ್, ಕೈಲಾಸ, ಗೌತಮ ಬಗದಲಕರ, ಉದಯ ಚಟನಳ್ಳಿ, ಮೋಹಿನ್ ಪಠಾಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net