ರೋಗಿಗಳಿಗೆ ದ್ರೋಹ ಮಾಡಬೇಡಿ

bkt-3-10
ಬಾಗಲಕೋಟೆ ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಡಿ.ಹೆರಂಜಲ್ ಕಲಾ, ಎಸ್ ಸಕ್ರಿ ವಾಣಿಜ್ಯ ಹಾಗೂ ಆರ್ ದೊಡ್ಡಿಹಾಳ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವೈದ್ಯರ ದಿನ ಪತ್ರಕರ್ತರ ದಿನ ಹಾಗೂ ಲೆಕ್ಕ ಪರಿಶೋಧಕರ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯರು, ಪತ್ರಕರ್ತರು, ಲೆಕ್ಕಪರಿಶೋಧಕರನ್ನು ಸನ್ಮಾನಿಸಲಾಯಿತು. ಡಾ.ಬಿ.ಎಚ್.ಕೆರೂಡಿ, ಡಾ.ಸುಭಾಸ ಪಾಟೀಲ, ಆನಂದ ದಲಬಂಜನ, ಮಹೇಶ ಅಂಗಡಿ, ವಿ ಪ್ರ ಮಂಡಳದ ಕಾರ್ಯಧ್ಯಕ್ಷೆ ಶ್ರೀಲತಾ ಹೆರಂಜಲ್, ವಿ.ಪ್ರ ಮಂಡಳದ ಗೌರವ ಕಾರ್ಯದರ್ಶಿ ಡಾ.ಗಿರೀಶ ಮಾಸೂರಕರ, ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀನಿವಾಸ ನರಗುಂದ ಇತರರು ಇದ್ದರು.
Published on

ಬಾಗಲಕೋಟೆ: ವೈದ್ಯ ವೃತ್ತಿ ಅತ್ಯಂತ ಮಹತ್ವವುಳ್ಳದ್ದು ವೈದ್ಯೋ ನಾರಾಯಣ ಹರಿ ವೈದ್ಯರನ್ನು ನಾರಾಯಣನಿಗೆ ಹೋಲಿಸಿದ್ದಾರೆ. ಆದ್ದರಿಂದ ಜನರು ನಮ್ಮ ಮೇಲಿಟ್ಟಿರುವ ನಂಬಿಕೆ ನಾವು ಉಳಿಸಿಕೊಳ್ಳಬೇಕು ಎಂದು ಡಾ.ಬಿ.ಎಚ್.ಕೆರೂಡಿ ಹೇಳಿದರು.

ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಡಿ.ಹೆರಂಜಲ್ ಕಲಾ, ಎಸ್ ಸಕ್ರಿ ವಾಣಿಜ್ಯ ಹಾಗೂ ಆರ್ ದೊಡ್ಡಿಹಾಳ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವೈದ್ಯರ ದಿನ ಪತ್ರಕರ್ತರ ದಿನ ಹಾಗೂ ಲೆಕ್ಕ ಪರಿಶೋಧಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ೧೯೯೧ರಲ್ಲಿ ಈ ದಿನ ಪ್ರಾರಂಭವಾಯಿತು. ಶ್ರೇಷ್ಠ ವೈದ್ಯರು ಶಿಕ್ಷಣ ಪ್ರೇಮಿಗಳು, ರಾಜಕಾರಣಿಗಳೂ ಆದ ಬಿಧನೆ ಚಂದ್ರ ರಾಯ್ ಅವರ ಸವಿನೆನಪಿಗೆ ಈ ದಿನ ಆಚರಿಸಲಾಗುತ್ತದೆ. ಬಿ ಸಿ ರಾಯ್ ಅವರಿಗೆ ೧೯೬೧ರಲ್ಲಿ "ಭಾರತ ರತ್ನ" ನೀಡಿ ಗೌರವಿಸಲಾಗಿದೆ. ಅದು ಅವರ ಕರ್ತವ್ಯ ಪ್ರಜ್ಞೆಗೆ ಸಂದ ಗೌರವ ಎಂದರು.

ಡಾ.ಎಚ್.ಎಫ್.ಯೋಗಪ್ಪನವರ ಮಾತನಾಡಿ, ವೈದ್ಯರಾದವರು ಸಮಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆ ಉಳ್ಳವರಾಗಿರಬೇಕು. ಕೇವಲ ಹಣ ಮಾಡಲೆಂದು ಈ ವೃತ್ತಿಗೆ ಬಂದರೆ ರೋಗಿಗಳಿಗೆ ದ್ರೋಹ ಮಾಡಿದಂತೆ ಪ್ರಮಾಣಿಕತೆ ಮತ್ತು ತ್ಯಾಗ ಈ ವೃತ್ತಿಯ ಧರ್ಮ. ಅದನ್ನು ಕಾಪಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಸುಭಾಸ ಪಾಟೀಲ, ಕಾನಿಪ ಜಿಲ್ಲಾಧ್ಯಕ್ಷ ಆನಂದ ದಲಬಂಜನ, ಪ್ರಧಾನ ಕಾರ್ಯದರ್ಶಿ ಶ್ರೀಶಂಕರ ಕಲ್ಯಾಣಿ, ರಾಜ್ಯ ಸಮಿತಿ ಸದಸ್ಯ ಮಹೇಶ ಅಂಗಡಿ ಸೇರಿದಂತೆ ೧೫ ಜನ ವೈದ್ಯರು, ಪತ್ರಕರ್ತರನ್ನು ಸನ್ಮಾನಿಸಲಾಯಿತು. ವಿ ಪ್ರ ಮಂಡಳದ ಕಾರ್ಯಧ್ಯಕ್ಷೆ ಶ್ರೀಲತಾ ಹೆರಂಜಲ್ ಅಧ್ಯಕ್ಷತೆ ವಹಿಸಿದ್ದರು. ವಿ.ಪ್ರ ಮಂಡಳದ ಗೌರವ ಕಾರ್ಯದರ್ಶಿ ಡಾ.ಗಿರೀಶ ಮಾಸೂರಕರ, ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀನಿವಾಸ ನರಗುಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net