ರೋಗಿಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಿ

Be careful not to disturb the patients.
Be careful not to disturb the patients.
Published on

ಮುಧೋಳ: ನಗರದ ಸರ್ಕಾರಿ ಆಸ್ಪತ್ರೆಗೆ ಬುಧವಾರ ದಿಢೀರ್ ಭೇಟಿ ನೀಡಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಎಲ್ಲ ವಿಭಾಗಗಳಲ್ಲಿ ಪರಿಶೀಲನೆ ನಡೆಸಿದರು.

ರೋಗಿಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಿ ಕೆಲಸ ಮಾಡಬೇಕು. ಸ್ವಚ್ಛತೆ ಸೇರಿದಂತೆ ಸೇವೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈಗಿದ್ದ ಕ್ಯಾಂಟೀನ್ ಏಜೆನ್ಸಿ ರದ್ದುಪಡಿಸಿ, ಅದನ್ನು ಅಕ್ಕ ಕೆೆ ತಂಡದ ನಿರ್ವಹಣೆಗೆ ನೀಡಿ ಎಂದು ಸೂಚಿಸಿದರು.

ಶೌಚಗೃಹಗಳನ್ನು ಸುಸ್ಥಿತಿಯಲ್ಲಿಟ್ಟು ನಿತ್ಯ ಬಳಕೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ವೈದ್ಯಾಧಿಕಾರಿ ಡಾ. ಅಶೋಕ ಸೂರ್ಯವಂಶಿ, ಪೌರಾಯುಕ್ತ ಗೋಪಾಲ ಕಾಸೆ ಅವರಿಗೆ ಸಚಿವರು ಸೂಚಿಸಿದರು.

ಸುದ್ದಿಗಾರರ ಜತೆಗೆ ಮಾತನಾಡಿದ ಸಚಿವ ತಿಮ್ಮಾಪೂರ, ಆಸ್ಪತ್ರೆಯ ಡಯಾಲಿಸಿಸ್ ಘಟಕ ಸುವ್ಯವಸ್ಥೆಯಲ್ಲಿದ್ದು, ಸ್ಕಾೃನಿಂಗ್‌ಗೆ ತಂತ್ರಜ್ಞರನ್ನು ನೇಮಕ ಮಾಡಲು ಡಿಎಚ್‌ಒಗೆ ತಿಳಿಸಲಾಗುವುದು. ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು. ನೇತ್ರ ಹಾಗೂ ದಂತ ತಜ್ಞರನ್ನು ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗುವುದು. ತಾಯಿ ಹಾಗೂ ಮಗು ಆಸ್ಪತ್ರೆಗೆ ಶೀಘ್ರ ಶಿಲಾನ್ಯಾಸ ನೆರವೇರಿಸಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ರಾಘು ಮೊಕಾಸಿ, ಭೀಮಸಿ ಸರ್ಕಾರಕುರಿ, ತಾಪಂ ಇಒ ಉಮೇಶ ಸಿದ್ನಾಳ, ವಿವೇಕ ಬಿರಾದಾರ, ಡಾ. ಬಿ.ವಿ. ಪಾಟೀಲ, ಡಾ. ಸುನಿತಾ ಕಾಮರಡ್ಡಿ, ಡಾ. ಸುಧೀರ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net