ರೋಗಿಗಳಲ್ಲಿ ದೇವರನ್ನು ಕಾಣಬೇಕು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ

3
Published on

ತುಮಕೂರು: ಭಾರತೀಯ ಸಂಸತಿಯಲ್ಲಿ ಮಾತಾ, ಪಿತೃ, ಗುರು ಹಾಗೂ ವೈದ್ಯರಲ್ಲಿ ದೇವರನ್ನು ಕಾಣುತ್ತೇವೆ. ವೈದ್ಯ ವೃತ್ತಿ ಶ್ರೇಷ್ಠ ವೃತ್ತಿಯಾಗಿದ್ದು ಬಡವರ ಸೇವೆ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ನಗರದ ಶ್ರೀದೇವಿ ವೈದ್ಯಕಿಯ ಕಾಲೇಜಿನಲ್ಲಿ ಶನಿವಾರ ವೈದ್ಯಕಿಯ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ನಿಮ್ಮಲ್ಲಿಗೆ ಬರುವ ರೋಗಿಗಳಲ್ಲಿ ದೇವರನ್ನು ಕಾಣಬೇಕು, ಉತ್ತಮ ಚಿಕಿತ್ಸೆ ನೀಡಬೇಕು. ವೈದ್ಯರ ಮಾತಿನಲ್ಲಿಯೇ ರೋಗಿಗೆ ಅರ್ಧ ಕಾಯಿಲೆ ಗುಣವಾಗಬೇಕು ಎಂದು ಕಿವಿಮಾತು ಹೇಳಿದರು.

ಉತ್ತಮ ಮನುಷ್ಯನಾಗಿ ಹೊರ ಹೊಮ್ಮಬೇಕು, ರೋಗಿಗಳಿಗೆ ನಗುಮುಖ, ಕರುಣೆಯಿಂದ ಚಿಕಿತ್ಸೆ ನೀಡಿ ಅವರ ಪಾಲಿಗೆ ದೇವರಾಗುತ್ತಿರಬೇಕು. ಮಾತೃ ಭಾಷೆಯಲ್ಲಿಯೇ ರೋಗಿಯ ಜತೆಯಲ್ಲಿ ವ್ಯವಹರಿಸಿದಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಧೀಶ ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಎಸ್​.ಸಂಗ್ರೇಶಿ ಮಾತನಾಡಿ, ವೃತ್ತಿಯನ್ನು ಪ್ರೀತಿಸಿ ಮತ್ತು ಮುಂದುವರಿಸಿ, ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ ಸಂಸ್ಥೆಯನ್ನು ನೆನಪಿಸಿಕೊಳ್ಳಿ ಎಂದರು.

ಕೋಲಾರದ ದೇವರಾಜು ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಮಾಜಿ ಕುಲಪತಿ ಡಾ.ಎಸ್​.ಕುಮಾರ್​ ಮಾತನಾಡಿ, ಆರೋಗ್ಯವಂತ ಮಗು, ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ವಿಶೇಷ ಕಾಳಜಿ ವಹಿಸಬೇಕು ಎಂದರು.

ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸೀಮಿತ ಲೋಕಜ್ಞಾನದಿಂದ ಪರಿಪೂರ್ಣ ಜ್ಞಾನ ನೀಡಬೇಕು, ವೈದ್ಯಕಿಯ ೇತ್ರದಲ್ಲಿ ಉತ್ತಮವಾದ ಗುಣಮಟ್ಟ ಹಾಗೂ ಶಿಕ್ಷಣ ವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೂ ಪೂರಕವಾಗಿದೆ ಎಂದು ತಿಳಿಸಿದರು.

ಶ್ರೀದೇವಿ ಚಾರಿಟಬಲ್​ ಟ್ರಸ್ಟ್​ ಅಧ್ಯಕ್ಷ ಡಾ.ಎಂ.ಆರ್​.ಹುಲಿನಾಯ್ಕರ್​ ಮಾತನಾಡಿ, 142 ವಿದ್ಯಾರ್ಥಿಗಳು ವೈದ್ಯಕಿಯ ಪದವಿ ಪಡೆದಿರುವುದು ಮಾದರಿಯಾಗಿದೆ ಎಂದರು.

27 ವಿದ್ಯಾರ್ಥಿಗಳು ರ್ಯಾಂಕ್​: ರಾಜೀವ್​ ಗಾಂಧಿ ಆರೋಗ್ಯ ವಿವಿಯಲ್ಲಿ ಶ್ರೀದೇವಿ ವೈದ್ಯಕಿಯ ಕಾಲೇಜಿನ 27 ವಿದ್ಯಾರ್ಥಿಗಳು ರ್ಯಾಂಕ್​ ಪಡೆದಿದ್ದು ಸನ್ಮಾನಿಸಲಾಯಿತು. ಬಿ.ಜೆ.ಕುಮಾರ್​, ಜಿ.ಕೃಷ್ಣ ಜಂಗಿದ್​, ಜೀವನ್​ ಅಂಗಲಕುಡಿತ್​, ಎಸ್​.ಸುಪ್ರಜಾ, ಎಚ್​.ಕೆ.ಚಿಂತನ, ಎಸ್​.ಶ್ರೀನಿಧಿ, ಸಿಂಗಾರೆಡ್ಡಿ ಮೇನಾ, ಎಂ.ಸಿಮ್ರಾನ್​ತಾಜ್​, ಎಂ.ಸುಪ್ರೀತ್​, ಶಿವಾನಿ ಕುಮಾರಿ, ರತಾ ರಾಥೋರ್​ ಅವರು ರ್ಯಾಂಕ್​ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಶಾಸಕ ಜಿ.ಬಿ.ಜ್ಯೋತಿಗಣೇಶ್​, ಶ್ರೀದೇವಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಆರ್​.ರಮಣ್​, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್​.ಪಾಟೀಲ್​, ಪ್ರಾಚಾರ್ಯ ಡಾ.ಡಿ.ಕೆ.ಮಹಾಬಲರಾಜು, ಉಪಪ್ರಾಚಾರ್ಯ ಡಾ.ರೇಖಾ, ನೇತ್ರತರಾದ ಡಾ.ಲಾವಣ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net