ರೋಗಿಗಳ ಹೊಸ ಜೀವನ ರೂಪಿಸುವವರು ವೈದ್ಯರು

1 ckm 5
ಚಿಕ್ಕಮಗಳೂರಿನ ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಗ್ರಾಮಸ್ಥರು ವೈದ್ಯ ಡಾ. ಡಾ. ಮನೋಜ್ ಸಾಲ್ಡಾನ ಅವರನ್ನು ಸನ್ಮಾನಿಸಿದರು. ಹಿರೇಮಗಳೂರು ಕಣ್ಣನ್, ಎಚ್.ಕೆ.ಕೇಶವಮೂರ್ತಿ, ಎಸ್.ಬಸವರಾಜ್, ಎಚ್.ಎಸ್.ಪುಟ್ಟಸ್ವಾಮಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಮನುಷ್ಯನು ಅನಾರೋಗ್ಯಕ್ಕೆ ಒಳಗಾದಾಗಲೆಲ್ಲಾ ಮನಸ್ಸಿಗೆ ಬರುವ ಮೊದಲ ಹೆಸರು ವೈದ್ಯರದು. ವೈದ್ಯರನ್ನು ಭಗವಂತನÀ ಎರಡನೇ ಸ್ವರೂಪವೆಂದು ಹೇಳಲಾಗುವ ಜೊತೆಗೆ ಜೀವ ನೀಡುವವರು ಎಂದರೆ ಸಂದೇಹವಿಲ್ಲ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ತಿಳಿಸಿದರು.

ನಗರದ ಹೊರವಲಯದ ಹಿರೇಮಗಳೂರು ಗ್ರಾಮಸ್ಥರ ವತಿಯಿಂದ ಮಂಗಳವಾರ ನಡೆದ ರಾಷ್ಟಿçÃಯ ವೈದ್ಯರ ದಿನಾಚರಣೆ ಪ್ರಯುಕ್ತ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಡಾ. ಮನೋಜ್ ಸಾಲ್ಡಾನ ಅವರಿಗೆ ಅವರಿಗೆ ಆರೋಗ್ಯ ಕೇಂದ್ರದಲ್ಲಿ ಗೌರವ ಸಮರ್ಪಿಸಿ ಮಾತನಾಡಿದರು.

ವೈದ್ಯರು ಹೊಸ ಜೀವನವನ್ನು ನೀಡುವ ಕೆಲಸ ಮಾಡುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಹಗಲು-ರಾತ್ರಿ ಎನ್ನದೇ ರೋಗಿಗಳ ನಿರಂತರ ಸೇವೆಯಲ್ಲಿ ತೊಡಗುವ ವೈದ್ಯರು ಸಣ್ಣ ಹಾಗೂ ದೊಡ್ಡ ಕಾಯಿಲೆಗಳಿಂದಲೂ ರೋಗಿಗಳನ್ನು ಹೊರತರುತ್ತಾರೆ. ಇಂಥವರನ್ನು ಪÀ್ರತಿಯೊಬ್ಬರು ಗೌರವಿಸಬೇಕು ಎಂದರು.

ಜೀವನವನ್ನು ಸುಲಭಗೊಳಿಸಲು, ದೇಹವನ್ನು ಆರೋಗ್ಯವಾಗಿಡುವುದು ಅತ್ಯಂತ ಮುಖ್ಯ. ರೋಗಗಳಿಂದ ದೂರವಿದ್ದರೆ, ನೀವು ಜೀವನದ ಪ್ರತಿ ಕ್ಷಣವನ್ನು ಸಂತೋಷದಿAದ ಬದುಕಲು ಸಾಧ್ಯವಾಗಲಿದೆ. ವೈದ್ಯರು ನಮ್ಮನ್ನು ರೋಗಗಳಿಂದ ದೂರವಿಡುವ ಕಾಯಕ ಮಾಡುತ್ತಿದ್ದಾರೆ ಎಂದು ಹೇಳಿದರು.

ಇಂದಿನ ಕಾಲದಲ್ಲಿ ಜನರು ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಂತಹ ಪರಿಸ್ಥಿ ತಿಯಲ್ಲಿ ವೈದ್ಯರು ನಮ್ಮ ಏಕೈಕ ಬೆಂಬಲ. ವೈದ್ಯರನ್ನು ಗೌರವಿಸುವ ಮತ್ತು ಅವರ ಕೆಲಸವನ್ನು ಶ್ಲಾಘಿಸುವ ಉz್ದೆÃಶದಿಂದ ಪ್ರತಿವರ್ಷ ಜುಲೈ ೧ರಂದು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.

ಗ್ರಾಮಸ್ಥ ಎಚ್.ಕೆ.ಕೇಶವಮೂರ್ತಿ ಮಾತನಾಡಿ, ವೈದ್ಯೋ ನಾರಾಯಣೋ ಹರಿಃ ಎಂಬ ನಾಣ್ಣುಡಿ ಇದೆ. ಅಂದರೆ ವೈದ್ಯರು ದೇವರ ಸಮಾನ ಎಂದರ್ಥ. ಯಾವುದೇ ಅನಾರೋಗ್ಯದ ಸಂದರ್ಭದಲ್ಲಿ ನಮ್ಮನ್ನು ಗುಣಪಡಿಸಿ ರೋಗಿಗಳಿಗೆ ಮರುಜೀವ ನೀಡುವ ವೈದ್ಯರು ನಿಜಕ್ಕೂ ದೇವರ ಸ್ವರೂಪಿ ಎಂದರೆ ತಪ್ಪಲಾಗುವುದಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎಸ್.ಬಸವರಾಜ್, ಲೋಕೇಶ್, ಎಚ್.ಎಸ್.ಪುಟ್ಟಸ್ವಾಮಿ, ಎಚ್. ಜೆ.ಶಿವಕುಮಾರ್, ಎಚ್.ಎಸ್.ರವಿಕುಮಾರ್, ಎಚ್.ಎಸ್.ಧನಂಜಯ್, ಎಚ್.ಪಿ.ಶಿವಕುಮಾರ್, ಸಚಿನ್, ಶ್ರೀನಿವಾಸ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net